×
Ad

ಕಾಸರಗೋಡು: ಸೈಂಟ್ ಮೇರಿಸ್ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Update: 2017-03-10 21:02 IST

ಕಾಸರಗೋಡು, ಮಾ.10: ಜಿಲ್ಲೆಯಲ್ಲಿ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಮಂಗಳೂರು ನಡೆಸುವ ಪ್ರಥಮ ಡಿಗ್ರಿ ಕಾಲೇಜನ್ನು ಮಂಗಳೂರು ಧರ್ಮಕೇಂದ್ರದ ಧರ್ಮಧ್ಯಕ್ಷರಾದ ಪರಮ ಪೂಜ್ಯ ಡಾ ಎಲೋಶಿಯಸ್ ಪಾವ್ಲ್ ಡಿಸೋಜಾರವರು ಉದ್ಘಾಟಿಸಿ, ಆಶಿರ್ವಚನಗೈದರು.

ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯನ್ನು ಐವನ್ ಡಿಸೋಜಾ ಮುಖ್ಯಸಚೇತರು ಕರ್ನಾಟಕ ವಿಧಾನ ಪರಿಷತ್ ನೆರವೇರಿಸಿದರು. ವಾಚನಾಲಯದ ಉದ್ಘಾಟನೆಯನ್ನು ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಶ್ರೀ ರೊಯ್ ಕಾಸ್ತೆಲಿನೊ ಮಾಡಿದರು.

ಕಾರ್ಯಕ್ರಮದಲ್ಲಿ ಕಥೊಲಿಕ್ ಬೋರ್ಡ್ ಒಫ್ ಎಜುಕೇಶನ್ ಮಂಗಳೂರು ಇದರ ಕಾರ್ಯದರ್ಶಿ ವಂದನೀಯ ಸ್ವಾಮಿ ಜೆರಾಲ್ಡ್ ಡಿಸೋಜಾ, ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ.ಎನ್ ಕೃಷ್ಣ ಭಟ್, ಮಂಜೇಶ್ವರ ಮಾಜಿ ಶಾಸಕರಾದ ಎಡ್ವಕೇಟ್ ಸಿ.ಎಚ್ ಕುಂಬ್ಞು , ಕಾಸರಗೋಡು ಜಿಲ್ಲಾಪಂಚಾಯತ್ ಸದಸ್ಯರಾದ ಎಡ್ವಕೇಟ್ ಕೆ. ಶ್ರೀಕಾಂತ್, ಬದಿಯಡ್ಕ ಗ್ರಾಮಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಕ್ರಾಸ್ತ, ಕುಂಬಳೆ ದೇವಾಲಯದ ಧರ್ಮಗುರುಗಾಳದ ವಂದನೀಯ ಸ್ವಾಮಿ ಮಾರ್ಸೆಲ್ ಸಲ್ಡಾನ, ದೈಜಿ ವರ್ಡ್‌ನ ನಿರ್ದೇಶಕರಾದ ವಾಲ್ಟರ್ ನಂದಲಿಕೆ, ಶ್ರೀ ಸ್ಟ್ಯಾನಿ ಫೆರ್ನಾಂಡಿಸ್, ಶ್ರೀಮತಿ ಮರಿಯ ರಿನ್ನ ಡಿಸೋಜಾ, ಶ್ರೀ ರೊನಾಲ್ಡ್ ಕ್ರಾಸ್ತ, ಬೇಳ ಧರ್ಮಕೇಂದ್ರದ ಸಹಾಯಕ ಧರ್ಮಗುರುಗಾಳದ ವಂದನೀಯ ಸ್ವಾಮಿ ಡೆನ್ಜಿಲ್ ಲೋಬೊ, ಕಪಿತಾನೀಯೊ ಕಾನ್ವೆಂಟಿನ ಸುಪಿರಿಯರ್ ಸಿ ಕಾರ್ಮಿನ್, ಶ್ರೀ ವಿಕ್ಟರ್ ಮೊಂತೇರೊ, ವಿನ್ಸೆಂಟ್ ಮಾಚಾದೊ ಉಪತ್ಥಿತರಿದ್ದರು.

ಕಾರ್ಯಕ್ರಮಕ್ಕೆ ಕಾಸರಗೋಡು ವಲಯದ ಹಾಗೂ ಶೋಕಮಾತ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಳು ಹಾಗೂ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ನಿರ್ದೇಶಕರಾದ ಅತೀ ವಂದನೀಯ ಸ್ವಾಮಿ ವಿನ್ಸೆಂಟ್ ಡಿಸೋಜಾ ರವರು ಸ್ವಾಗತಿಸಿದರು. ಸೈಂಟ್ ಮೇರಿಸ್ ಕಾಲೇಜಿನ ಪ್ರಾಶುಂಪಾಲೆ ಸಿ ಜೀವಾ ಚಾಕೊ ವರದಿ ಮಂಡಿಸಿದರು. ಎಡ್ವಕೇಟ್ ಎಮ್. ಎಸ್ ತೋಮಸ್ ಡಿಸೋಜಾ ವಂದಿಸಿದರು. ಶ್ರೀಮತಿ ಅನಿತಾ ಡಿಸೋಜಾ, ಶ್ರೀ ಜಯರಾಮ್ ಮತ್ತು ಕುಮಾರಿ ದೀಪ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News