×
Ad

ಕೊಣಾಜೆ: ಪಿ.ಎ.ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ‘ಬದಲಾವಣೆಗಾಗಿ ದಿಟ್ಟ ಹೆಜ್ಜೆಕಾರ್ಯಕ್ರಮ

Update: 2017-03-10 21:27 IST

ಕೊಣಾಜೆ, ಮಾ.10: ವಿಶ್ವ ಮಹಿಳಾ ದಿನದ ಅಂಗವಾಗಿ ನಡುಪದವಿನ ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಜೆಂಡರ್ ಚ್ಯಾಂಪಿಯನ್ ಫೋರಂ-ಫೀನಿಕ್ಸ್ ಇದರ ಆಶ್ರಯದಲ್ಲಿ 'ಬದಲಾವಣೆಗಾಗಿ ದಿಟ್ಟ ಹೆಜ್ಜೆ' ಎಂಬ ವಿಷಯದಲ್ಲಿ ಕಾರ್ಯಗಾರವು ನಡೆಯಿತು.

ಕೆ.ಎಂ.ಸಿ.ಯ ಸರ್ಜರಿ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ.ತಂಗಂ ವರ್ಗೀಸ್ ಜೋಶ್ವ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಮಾಜದಲ್ಲಿ ಮಹಿಳೆಯ ಪಾತ್ರ ಬಹಳ ಮಹತ್ವಪೂರ್ಣವಾದುದು. ಹೆಣ್ಣು ಮಕ್ಕಳು ಜಾಗೃತರಾಗಿದ್ದುಕೊಂಡು, ತಮ್ಮ ಧೈರ್ಯ, ಸಾಹಸ ಮತ್ತು ದಿಟ್ಟತನದಿಂದ ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸಾಯನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಶರ್ಮಿಳಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಜೆಂಡರ್ ಚ್ಯಾಂಪಿಯನ್ ಪೋರಂನ ಡಾ. ಶೈಲೆಟ್ ಮ್ಯಾಥ್ಯೂ ಸ್ವಾಗತಿಸಿದರು. ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ವಂದಿಸಿದರು. ಸಹಾದಿಯ ನಿಸಾ ಕಾರ್ಯಕ್ರಮ ನಿರೂಪಿ ಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News