ಟ್ರಂಪ್‌ರ ಅಮೆರಿಕದಲ್ಲಿ ದ್ವೇಷ, ಪೂರ್ವಾಗ್ರಹದಲ್ಲಿ ಹೆಚ್ಚಳ : ಸಮೀಕ್ಷೆ
Update: 2017-03-10 22:10 IST
ವಾಶಿಂಗ್ಟನ್, ಮಾ. 10: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಅಮೆರಿಕದಲ್ಲಿ ದ್ವೇಷ ಮತ್ತು ಪೂರ್ವಾಗ್ರಹ ಹೆಚ್ಚಿದೆ ಎಂದು ಅಮೆರಿಕದ ಸುಮಾರು ಮೂರನೆ ಎರಡರಷ್ಟು ಮತದಾರರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆಯೊಂದು ಗುರುವಾರ ಹೇಳಿದೆ.
2016ರ ನವೆಂಬರ್‌ನಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ದ್ವೇಷ ಮತ್ತು ಪೂರ್ವಾಗ್ರಹ ಹೆಚ್ಚಿದೆ ಎಂದು ಕ್ವಿನಿಪಿಯಾಕ್ ವಿಶ್ವವಿದ್ಯಾನಿಲಯದಲ್ಲಿ ಮತದಾನದಲ್ಲಿ ಭಾಗವಹಿಸಿದ 63 ಶೇಕಡ ಮಂದಿ ಹೇಳಿದ್ದಾರೆ ಹಾಗೂ ಯಾವುದೇ ಬದಲಾವಣೆಯಾಗಿಲ್ಲ ಎಂದು 32 ಶೇ. ಮಂದಿ ಅಭಿಪ್ರಾಯಪಟ್ಟಿದ್ದಾರೆ.