×
Ad

ಹೆಬ್ರಿ: ಎಟಿಎಂ ಕಳವಿಗೆ ಯತ್ನ

Update: 2017-03-10 22:38 IST

ಹೆಬ್ರಿ, ಮಾ.10: ಮುಸುಕುಧಾರಿ ಅಪರಿಚಿತರಿಬ್ಬರು ಕೆಳಪೇಟೆಯಲ್ಲಿರುವ ಕಾರ್ಪೋರೇಶನ್ ಬ್ಯಾಂಕ್‌ನ ಎಟಿಎಂನಲ್ಲಿದ್ದ ಹಣ ಕಳವಿಗೆ ಯತ್ನಿಸಿರುವ ಘಟನೆ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ನಡೆದಿದೆ.

ಇಬ್ಬರು ವ್ಯಕ್ತಿಗಳು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಎಟಿಎಂ ಒಳಗೆ ನುಗ್ಗಿ, ಅದರಲ್ಲಿದ್ದ ಹಣವನ್ನು ಕಳವು ಮಾಡುವುದಕ್ಕಾಗಿ ಎಟಿಎಂ ಯಂತ್ರ ವನ್ನು ಒಡೆಯಲು ಪ್ರಯತ್ನಿಸಿದ್ದಾರೆ.

ಈ ದೃಶ್ಯ ಎಟಿಎಂನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬ್ಯಾಂಕ್‌ನ ಹೆಬ್ರಿಯ ಶಾಖೆಯ ಪ್ರಬಂಧಕ ಎನ್.ಜಿ.ವಿಜಯ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News