ಶಿರ್ವ: ಹಟ್ಟಿಯಿಂದ ದನ ಕಳವು
Update: 2017-03-10 22:44 IST
ಶಿರ್ವ, ಮಾ.10: ಬೆಳಪು ಗ್ರಾಮದ ಮಿಲಿಟರಿ ಕಾಲೋನಿಯ ಎಡ್ವರ್ಡ್ ಮೆಂಡೋನ್ಸಾ ಎಂಬವರ ಮನೆಯ ಹಟ್ಟಿಯಲ್ಲಿದ್ದ ಎರಡು ಜೆರ್ಸಿ ದನಗಳನ್ನು ಮಾ.8ರಂದು ರಾತ್ರಿ ವೇಳೆ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದನದ ಹಟ್ಟಿಗೆ ನುಗ್ಗಿ ಕಳ್ಳರು ಎರಡು ದೊಡ್ಡ ಜೆರ್ಸಿಯನ್ನು ಕಳವು ಮಾಡಿದ್ದು, ಇದರ ಒಟ್ಟು ವೌಲ್ಯ ಸುಮಾರು 40,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.