ಕೊಣಾಜೆ: ಧೂಮಪಾನ ನಿಷೇಧ ಸಪ್ತಾಹ ಕಾರ್ಯಕ್ರಮ
ಕೊಣಾಜೆ, ಮಾ.10: ಜಸ್ಟೀಸ್ ಕೆ.ಎಸ್.ಹೆಗ್ಡೆ ವೈದ್ಯಕೀಯ ವಿದ್ಯಾಲಯ, ವಿದ್ಯಾರ್ಥಿ ಪರಿಷತ್ ಕ್ಷೇಮ ಮತ್ತು ಮಿಷನ್ ಹೋಪ್ ಕ್ಷೇಮ ಇದರ ಸಹಯೋಗದೊಂದಿಗೆ ಮಾನಸಿಕ ರೋಗ ಚಿಕಿತ್ಸಾ ವಿಭಾಗವು ಧೂಮಪಾನ ನಿಷೇಧ ದಿನ ಮತ್ತು ಸಪ್ತಾಹ ಕಾರ್ಯಕ್ರಮವು ಶುಕ್ರವಾರ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕರಾದ ಮೇಜರ್ ಡಾ.ಶಿವಕುಮಾರ್ ಹಿರೇಮಠ್ ಅವರು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಸ್.ಹೆಗ್ಡೆ ವೈದ್ಯಕೀಯ ವಿದ್ಯಾಲಯದ ಕ್ಷಿನಿಕಲ್ ವಿಭಾಗದ ವೈಸ್ ಡೀನ್ ಡಾ.ಪಿ.ಎಸ್.ಪ್ರಕಾಶ್‌ರವರು ವಹಿಸಿದ್ದರು. ಅತಿಥಿಯಾಗಿ ಕ್ಷೇಮ ಕಾಲೇಜಿನ ವೈಸ್ ಡೀನ್ ಡಾ.ಅಮೃತ್ ಮಿರಾಜ್‌ಕರ್ ಅವರು ಉಪಸ್ಥಿತರಿದ್ದರು.
ಬಳಿಕ ಕಾರ್ಯಕ್ರಮದಲ್ಲಿ ಧೂಮಪಾನದಿಂದಾಗುವ ದುಷ್ಪರಿಣಾಮ ಬಗ್ಗೆ ಸಾರ್ವಜನಿಕ ಆರೋಗ್ಯ ವಿಭಾಗದ ಡಾ.ಜಗನ್ನಾಥ್, ಯೆನಪೋಯ ವೈದ್ಯಕೀಯ ವಿದ್ಯಾಲಯದ ಮನೋರೋಗ ಚಿಕಿತ್ಸಾ ವಿಭಾಗದ ಡಾ.ಅನಿಲ್ ಕಕ್ಕುಂಜೆ, ಕ್ಷೇಮ ಜನರಲ್ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅದಿತಿ ಅವರು ಮಾಹಿತಿಯನ್ನು ನೀಡಿದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕುಮಾರಿ ಶ್ರೇಯ ಶೆಟ್ಟಿ ವಂದಿಸಿ, ಮನೋರೋಗ ಚಿಕಿತ್ಸಾ ವಿಭಾಗದ ಸಲಹೆಗಾರರಾದ ಸುಮನ್ ಪಿಂಟೋ ಅವರು ವಂದಿಸಿದರು.