×
Ad

ಶಾಲಾ ಪರಿಸರಗಳಲ್ಲಿ ಪಾನ್‌ಮಸಾಲ ಮಾರಾಟ: 48 ಪ್ರಕರಣಗಳು ದಾಖಲು

Update: 2017-03-10 23:05 IST

ಕಾಸರಗೋಡು, ಮಾ.10: ಶಾಲೆ, ಕಾಲೇಜು ಪರಿಸರಗಳಲ್ಲಿ ಪಾನ್ ಮಸಾಲ ಮಾರಾಟ, ಉಪಯೋಗ ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯವರ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ 48 ಪ್ರಕರಣಗಳು ದಾಖಲಾಗಿವೆ. 5700 ಪ್ಯಾಕೆಟ್ ಪಾನ್‌ಮಸಾಲ ಉತ್ಪನ್ನಗಳು, 70 ಪ್ಯಾಕೆಟ್ ಸಿಗರೇಟ್, ಇತರ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಅನಕೃತ ಉತ್ಪನ್ನಗಳ ಮಾರಾಟ ತಡೆಗಟ್ಟಲು ತಪಾಸಣೆ ಚುರುಕುಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಕಾರಿ ಕೆ. ಜಿ. ಸೈಮನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News