ಈಗಲೂ ಚಂದ್ರನಿಗೆ ಪ್ರದಕ್ಷಿಣೆ ಬರುತ್ತಿರುವ ‘ಚಂದ್ರಯಾನ-1’
Update: 2017-03-10 23:12 IST
ವಾಶಿಂಗ್ಟನ್, ಮಾ. 10: ಕಳೆದುಹೋಗಿದೆಯೆಂದು ಭಾವಿಸಲಾಗಿರುವ ಭಾರತದ ‘ಚಂದ್ರಯಾನ-1’ ನೌಕೆ ಈಗಲೂ ಚಂದ್ರನಿಗೆ ಪ್ರದಕ್ಷಿಣೆ ಬರುತ್ತಿದೆ ಎಂದು ನಾಸಾ ವಿಜ್ಞಾನಿಗಳು ಹೇಳುತ್ತಾರೆ.
ಚಂದ್ರನ ಅಧ್ಯಯನಕ್ಕಾಗಿ ಭಾರತ ಕಳುಹಿಸಿದ ಪ್ರಥಮ ಮಾನವರಹಿತ ನೌಕೆ ಚಂದ್ರಯಾನ 1. ಚಂದ್ರನ ಮೇಲ್ಮೈಯ ಚಿತ್ರ ತೆಗೆಯಲು ಹಾಗೂ ಅಮೂಲ್ಯ ಸಂಪನ್ಮೂಲಗಳನ್ನು ಪತ್ತೆಹಚ್ಚಲು 2008ರಲ್ಲಿ ಚಂದ್ರಯಾನ-1ನ್ನು ಕಳುಹಿಸಲಾಗಿತ್ತು.