ಹಿಂದೂ ವಿವಾಹ ಮಸೂದೆಗೆ ಪಾಕ್ ಸಂಸತ್ತು ಒಪ್ಪಿಗೆ
Update: 2017-03-10 23:14 IST
ಇಸ್ಲಾಮಾಬಾದ್, ಮಾ. 10: ಪಾಕಿಸ್ತಾನದ ಹಿಂದೂ ಸಮುದಾಯದ ಮದುವೆಗಳನ್ನು ನಿಯಂತ್ರಿಸುವ ಮಹತ್ವದ ಹಿಂದೂ ವಿವಾಹ ಕಾನೂನನ್ನು ಆ ದೇಶದ ಸಂಸತ್ತು ಗುರುವಾರ ಅಂಗೀಕರಿಸಿದೆ ಎಂದು ‘ಡಾನ್’ ಆನ್‌ಲೈನ್ ವರದಿ ಮಾಡಿದೆ.
ಪಾಕಿಸ್ತಾನದ ಮಾನವಹಕ್ಕುಗಳ ಸಚಿವ ಕಮ್ರಾನ್ ಮೈಕಲ್ ಮಸೂದೆಯನ್ನು ನ್ಯಾಶನಲ್ ಅಸೆಂಬ್ಲಿಯಲ್ಲಿ ಮಂಡಿಸಿದರು. ಇನ್ನು ಅಧ್ಯಕ್ಷ ಮಮ್ನೂನ್ ಹುಸೈನ್ ಮಸೂದೆಗೆ ಸಹಿ ಹಾಕಿದರೆ ಅದು ಕಾನೂನಾಗುತ್ತದೆ.
ಮಸೂದೆಯನ್ನು ಸೆನೆಟ್ ಫೆಬ್ರವರಿ ತಿಂಗಳಲ್ಲಿ ಅನುಮೋದಿಸಿತ್ತು.