31 ಕಾರ್ಮಿಕರ ಅಪರಾಧ ಸಾಬೀತು ಮಾರುತಿ ಕಾರ್ಖಾನೆ ಹಿಂಸಾಚಾರ ಪ್ರಕರಣ
Update: 2017-03-10 23:30 IST
ಹರ್ಯಾಣ, ಮಾ.10: ಹರ್ಯಾಣದ ಗುರುಗ್ರಾಮ ಜಿಲ್ಲೆಯಲ್ಲಿರುವ ಮನೆಸರ್ ಎಂಬಲ್ಲಿರುವ ಮಾರುತಿ ಕಾರು ನಿರ್ಮಾಣ ಘಟಕದಲ್ಲಿ ನಡೆದ ಹಿಂಸಾಚಾರದಲ್ಲಿ ಘಟಕದ ಮ್ಯಾನೇಜರ್ ಅವನೀಶ್ ಕುಮಾರ್ ಎಂಬವರು ಮೃತಪಟ್ಟ ಪ್ರಕರಣದಲ್ಲಿ 31 ಕಾರ್ಮಿಕರನ್ನು ದೋಷಿಗಳೆಂದು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದಲ್ಲಿ 117 ಕಾರ್ಮಿಕರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 2012ರಲ್ಲಿ ಸಂಭವಿಸಿದ ಈ ಘಟನೆಗೆ ಸಂಬಂಧಿಸಿ ಒಟ್ಟು 148 ಕಾರ್ಮಿಕರನ್ನು ಬಂಧಿಸಿ ದೋಷಾರೋಪ ಹೊರಿಸಲಾಗಿತ್ತು. ಇವರಲ್ಲಿ 139 ಮಂದಿ ಜಾಮೀನು ಪಡೆದಿದ್ದರೆ, ಈ ಹಿಂದಿನ ಕಾರ್ಮಿಕರ ಯೂನಿಯನ್ ಸದಸ್ಯರಾಗಿದ್ದ ಎಂಟು ಮಂದಿಗೆ ಜಾಮೀನು ದೊರೆತಿರಲಿಲ್ಲ. ಈ ಕಾರ್ಖಾನೆಯಲ್ಲಿ ಕಾರ್ಮಿಕರ ಯೂನಿಯನ್ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿ 2011ರಿಂದ ಮೂರು ಬಾರಿ ಕಾರ್ಮಿಕರು ಮುಷ್ಕರ ನಡೆಸಿದ್ದರು.