×
Ad

ಯುಪಿ ಚುನಾವಣೆಯಲ್ಲಿ ಭಾರೀ ಗೋಲ್‌ಮಾಲ್: ಮಾಯಾವತಿ ಆರೋಪ

Update: 2017-03-11 14:19 IST

ಲಕ್ನೋ, ಮಾ.11: ಉತ್ತರಪ್ರದೇಶ ಚುನಾವಣೆಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಸ್ಪಿ ಮುಖ್ಯಸ್ಥೆ ಮಾಯಾವತಿ ತನ್ನ ಪಕ್ಷದ ಹೀನಾಯ ಸೋಲಿಗೆ ಇವಿಎಂ ಯಂತ್ರದಲ್ಲಿನ ದೋಷವೇ ಕಾರಣ ಎಂದು ಹೇಳಿದ್ದಾರೆ.

‘‘ಇವಿಎಂ ಯಂತ್ರಗಳಲ್ಲಿ ದೋಷವಿತ್ತು. ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಮತ ಬೀಳುತ್ತಿತ್ತು. ಬೇರೆ ಪಕ್ಷಗಳ ಮತಗಳು ಬಿಜೆಪಿಗೆ ಹೋಗಿವೆ. ಮುಸ್ಲಿಮರ ಮತಗಳು ಬಿಜೆಪಿಗೆ ಹೇಗೆ ಬಿದ್ದವು? ಎಂಬ ಪ್ರಶ್ನೆ ಕಾಡುತ್ತಿದೆ.

ಬ್ಯಾಲೆಟ್ ಪೇಪರ್‌ನ ಮೂಲಕ ಮರು ಚುನಾವಣೆಯನ್ನು ನಡೆಸಬೇಕೆಂದು’’ ಮಾಯಾವತಿ ಆಗ್ರಹಿಸಿದ್ದಾರೆ. ‘‘ಪ್ರಾಮಾಣಿಕರಾಗಿದ್ದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮರು ಚುನಾವಣೆಗೆ ಒತ್ತಾಯಿಸಬೇಕು. ಮುಂದಿನ ದಿನಗಳಲ್ಲಿ ಬ್ಯಾಲಟ್ ಪೇಪರ್‌ನಲ್ಲಿ ಚುನಾವಣೆ ನಡೆಯಬೇಕೆಂದು’’ ಮಾಯಾವತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News