×
Ad

ಲಾಲು ಕೈಗೆ ಕೋಲು ಕೊಟ್ಟು ಪೆಟ್ಟು ತಿಂದ ಸುಶೀಲ್ ಮೋದಿ !

Update: 2017-03-11 15:21 IST

ಹೊಸದಿಲ್ಲಿ, ಮಾ. 11 : ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರಬಹುದು. ಆದರೆ ಬಿಹಾರದಲ್ಲಿ ಸೋತ ಬಿಜೆಪಿ ಮುಖಂಡರ ಗಾಯದ ನೋವು ಇನ್ನೂ ಆರಿದ ಹಾಗೆ ಕಾಣುತ್ತಿಲ್ಲ. ಸಾಲದ್ದಕ್ಕೆ ಈ ಗಾಯದ ಮೇಲೆ ಆಗಾಗ ಉಪ್ಪು ಸವರಲು ಲಾಲು ಪ್ರಸಾದ್ ಯಾದವ್ ಅವರೂ ಹಿಂದೆ ಬಿದ್ದಿಲ್ಲ. 

ಶನಿವಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಗಳಿಸುವ ಮುನ್ಸೂಚನೆ ಬಂದ ಕೂಡಲೇ ಎಚ್ಚೆತ್ತ ಬಿಜೆಪಿ ನಾಯಕ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಅಲ್ಲಿ ಎಸ್ಪಿ - ಕಾಂಗ್ರೆಸ್ ಮೈತ್ರಿಕೂಟಕ್ಕಾಗಿ ಪ್ರಚಾರ ನಡೆಸಿದ್ದ ಲಾಲು ಕಾಲೆಳೆಯಲು ಪ್ರಯತ್ನಿಸಿದರು.

ಟ್ವಿಟ್ಟರ್ ನಲ್ಲಿ " ಕ್ಯಾ ಹಾಲ್ ಹೈ ( ಹೇಗಿದ್ದೀರಿ ನೀವು ?) ಎಂದು ಮೋದಿ ಅವರು ಲಾಲು ಅವರನ್ನು ಕೇಳಿದರು. ಆದರೆ ಮೋದಿ ಆಟ ಲಾಲು ಎದುರು ನಡೆಯಲಿಲ್ಲ. ತಕ್ಷಣ ಪ್ರತಿಕ್ರಿಯಿಸಿದ ಲಾಲು " ನಾನು ಚೆನ್ನಾಗಿದ್ದೀನೆ . ನಿಮ್ಮನ್ನು ಉತ್ತರ ಪ್ರದೇಶದಲ್ಲಿ ಕಾಲಿಡಲು ಬಿಡದೆ ಬಿಜೆಪಿ ಲಾಭ ಮಾಡಿಕೊಂಡಿತು " ಎಂದು ಹೇಳಿಬಿಡಬೇಕೆ ?

ಒಟ್ಟಾರೆ ಸುಶೀಲ್ ಮೋದಿ ತಾವೇ ಬೆತ್ತವನ್ನು ಲಾಲು ಕೈಗೆ ಕೊಟ್ಟು ಪೆಟ್ಟು ತಿಂದ ಹಾಗಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News