ವಿದ್ಯುತ್ ಕಂಪೆನಿಗಳಿಂದ ವಂಚನೆ: ಆರೋಪ

Update: 2017-03-11 10:09 GMT

ಮಂಗಳೂರು, ಮಾ.11: ವಾಸ್ತವ್ಯ ಉದ್ದೇಶಕ್ಕೆ ಅನುಮತಿ ಪಡೆದ ಕಟ್ಟಡದಲ್ಲಿ ವಸತಿ ಮತ್ತು ವಾಣಿಜ್ಯ ಬಳಕೆಯ ಕೊಠಡಿಗಳಿರುವುದನ್ನೇ ಗುರಿಯಾಗಿಸಿಕೊಂಡ ವಿದ್ಯುತ್ ಕಂಪೆನಿಗಳು ಸದ್ರಿ ಕಟ್ಟಡಕ್ಕೆ ವಾಣಿಜ್ಯ ದರವನ್ನು ವಿಧಿಸುವ ಮೂಲಕ ವಿದ್ಯುತ್ ಗ್ರಾಹಕರನ್ನು ವಂಚಿಸುತ್ತಿವೆ. ಈ ಬಗ್ಗೆ ಕೆಇಆರ್‌ಸಿಗೆ ಮನವಿ ಸಲ್ಲಿಸಿ ನ್ಯಾಯ ದೊರಕಿಸಿಕೊಂಡಿದ್ದರೂ ಕೂಡ ವಿದ್ಯುತ್ ಕಂಪನಿಗಳು ಸಾರ್ವಜನಿಕರಿಗೆ ಮಾಹಿತಿ ನೀಡದೆ ಮೋಸ ಮಾಡುತ್ತಿವೆ ಎಂದು ತುಳುನಾಡ ರಕ್ಷಣಾ ವೇದಿಕೆಯ ದ.ಕ. ಜಿಲ್ಲಾ ಕಾರ್ಯದರ್ಶಿ ಜೆ.ವಿ. ಡಿಮೆಲ್ಲೊ ಆರೋಪಿಸಿದರು.

 ನಗರದ ತುಳುನಾಡ ರಕ್ಷಣಾ ವೇದಿಕೆಯ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಪಂಪ್, ಲ್‌ಟಿ, ಪಾರ್ಕಿಂಗ್ ಲೈಟ್‌ಗಳಿಗೂ ಸಂಪೂರ್ಣವಾಗಿ ವಾಸ್ತವ್ಯಕ್ಕೆ ಬಳಕೆಯಾದರೂ ಕೂಡ ವಾಣಿಜ್ಯ ದರವನ್ನು ಹಾಕಲಾಗುತ್ತಿತ್ತು. ಈ ನಿಯಮದಿಂದ ಒಂದೇ ಕಟ್ಟಡದಲ್ಲಿ ವಸತಿ ಮತ್ತು ವಾಣಿಜ್ಯ ಬಳಕೆ ಕೊಠಡಿ ಹೊಂದಿರುವವರಿಗೆ ಸಮಸ್ಯೆಯಾಗುತ್ತಿತ್ತು. ಜೊತೆಗೆ ದುಬಾರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. ಅದರಂತೆ ಕೆಇಆರ್‌ಸಿ ನಿಯಮವನ್ನು ಬದಲಾಯಿಸಿದೆ. ಅನ್ಯಾಯಕ್ಕೆ ಒಳಗಾದವರು ವಿದ್ಯುತ್ ಕಂಪನಿಗಳ ಮೂಲಕ ನ್ಯಾಯ ದೊರಕಿಸಿಕೊಳ್ಳಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ರಾಮ ಎಸ್. ಬಂಗೇರಾ, ಪ್ರಕಾಶ್, ರಕ್ಷಿತ್ ಬಂಗೇರಾ, ಸಿರಾಜ್ ಅಡ್ಕರೆ, ಪ್ರಶಾಂತ್ ಭಟ್, ಅಬ್ದುಲ್ ರಶೀದ್, ಜ್ಯೋತಿಕಾ ಜೈನ್, ಹರಿಶ್ ಶೆಟ್ಟಿ ಶಕ್ತಿನಗರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News