ಹೀನಾಯವಾಗಿ ಸೋತರೂ ಹಾಸ್ಯ ಪ್ರಜ್ಞೆ ಬಿಡದ ಅಖಿಲೇಶ್
Update: 2017-03-11 17:19 IST
ಲಕ್ನೋ, ಮಾ.11: ನಮ್ಮ ಸೈಕಲ್ ಪಂಕ್ಚರ್ ಆಗಿಲ್ಲ. ನಮ್ಮದು ಟ್ಯೂಬ್ ಲೆಸ್ ಸೈಕಲ್ . ಉತ್ತರ ಪ್ರದೇಶದ ಜನತೆಯ ತೀರ್ಮಾನವನ್ನು ಸ್ವೀಕರಿಸುತ್ತೇವೆ ಎಂದು ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 5 ವರ್ಷ ಸರಕಾರವನ್ನು ಮುನ್ನಡೆಸಿದ್ದೇವೆ. ಹೊಸ ಸರಕಾರವೂ ಅಭಿವೃದ್ಧಿಯತ್ತ ನಡೆಯುವ ವಿಶ್ವಾಸವಿದೆ ಎಂದರು.
ಫಲಿತಾಂಶದಿಂದ ತೀವ್ರ ನಿರಾಸೆಯಾಗಿದೆ. ನಾವು ಜನರಿಗೆ ಎಕ್ಸ್ ಪ್ರೆಸ್ ವೇ(ಉತ್ತರ ಪ್ರದೇಶದಲ್ಲಿರುವ ಹೆದ್ದಾರಿ)ನೀಡಿದೆವು, ಆದರೆ ಜನರಿಗೆ ಬುಲೆಟ್ ಟ್ರೈನ್(ಪ್ರಧಾನಿ ಮೋದಿಯ ಮಹತ್ವಾಕಾಂಕ್ಷಿ ಯೋಜನೆ) ಇಷ್ಟವಾಯಿತು. ನಾವು ಸಮಾಜವಾದಿ ಯೋಜನೆಯನ್ನು ಜಾರಿಗೆ ತಂದೆವು, ಅದರ ಹಣವನ್ನು ಹೆಚ್ಚಿಸಿ 1000 ರೂ. ಮಾಡಬೇಕೆಂದಿದ್ದೆ, ಆದರೆ ಜನರಿಗೆ ಅದು ಇಷ್ಟವಾಗಲಿಲ್ಲ.
ಕಾಂಗ್ರೆಸ್ ಜೊತೆ ಎಸ್ಪಿ ಮೈತ್ರಿ ಮುಂದುವರಿಯಲಿದೆ ಎಂದರು.