ಉಳ್ಳಾಲ: ಲಾರಿಗೆ ರಿಕ್ಷಾ ಢಿಕ್ಕಿ ,ರಿಕ್ಷಾ ಚಾಲಕನಿಗೆ ಗಾಯ
Update: 2017-03-11 19:01 IST
ಉಳ್ಳಾಲ, ಮಾ.11: ಅಂಬಿಕಾರೋಡ್ ಬಳಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲೇ ನಿಲ್ಲಿಸಲಾದ ಸರಕು ಲಾರಿಯ ಹಿಂಬದಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಕುಂಪಲ ಚೇತನನಗರ ನಿವಾಸಿ ಅನಿಲ್(38)ಎಂಬವರೇ ಗಂಭಿರ ಗಾಯಗೊಂಡ ಚಾಲಕರಾಗಿದ್ದಾರೆ. ಅವರು ತೊಕ್ಕೊಟ್ಟಿನಿಂದ ಕುಂಪಲದ ಕಡೆಗೆ ತನ್ನ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಅಂಬಿಕಾರೋಡಿನಲ್ಲಿ ರಸ್ತೆಯನ್ನು ಅತಿಕ್ರಮಿಸಿ ನಿಂತಿದ್ದ ಅಕ್ಕಿ ಮೂಟೆ ಹೊತ್ತಿದ್ದ ಸರಕು ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದ್ದಾರೆ.
ಢಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾವು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕ ಅನಿಲ್ ಗಂಭೀರ ಗಾಯಗೊಂಡಿದ್ದಾರೆ.