ಸೋನಿಯಾ ಅನುಪಸ್ಥಿತಿಯಲ್ಲಿ ಕಾರ್ಯಕರ್ತರಲ್ಲಿ ನಿರುತ್ಸಾಹ: ಕಾಂಗ್ರೆಸ್ ಸೋಲಿಗೆ ಮಾರ್ಗರೆಟ್ ಆಳ್ವ ಪ್ರತಿಕ್ರಿಯೆ

Update: 2017-03-11 16:10 GMT

ಮಂಗಳೂರು, ಮಾ.11: ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರ ಅನುಪಸ್ಥಿತಿಯಿಂದ ಕಾರ್ಯಕರ್ತರಲ್ಲಿ ಮೂಡಿರಬಹುದಾದ ನಿರುತ್ಸಾಹವು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿರಬಹುದು ಎಂದು ರಾಜಸ್ಥಾನ ಮತ್ತು ಉತ್ತರಾಖಂಡ್ ರಾಜ್ಯಗಳ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಪ್ರತಿಕ್ರಿಯಿಸಿದ್ದಾರೆ.

 ಅವರು ನಗರದ ಆಗ್ನೆಸ್ ಕಾಲೇಜಿನಲ್ಲಿ ತನ್ನ ಆತ್ಮಚರಿತ್ರೆಯ 'ಕರೇಜ್ ಆ್ಯಂಡ್ ಕಮಿಟ್‌ಮೆಂಟ್‌ 'ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮುನ್ನ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾನಾಡುತ್ತಿದ್ದರು.

 ಚುನಾಣೆಗಳಲ್ಲಿ ಸೋಲು, ಗೆಲುವು ಸಹಜವಾಗಿದೆ. ಇಂದು ಸೋತವರು ನಾಳೆ ಗೆಲ್ಲಬಹುದು. ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್‌ಗಳಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಉತ್ತಮ ಪರಿಶ್ರಮ ನಡೆಸಿದೆ. ಇದರಿಂದಾಗಿ ಅವರು ಗೆಲುವು ಸಾಧಿಸಿದ್ದಾರೆ.ಪಂಚ ರಾಜ್ಯ ಚುನಾವಣೆಯಲ್ಲಿ ಎರಡು ರಾಜ್ಯಗಳಳ್ಲಿ ಮಾತ್ರ ಕಾಂಗ್ರೆಸ್ ಸೋತಿದೆ. ಬೇರೆ ರಾಜ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದೆ. ಸೋಲಿನ ಈ ಬಗ್ಗೆ ಕಾಂಗ್ರೆಸ್ ನಾಯಕರು ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದರು.

ಪಕ್ಷ ತೊರೆಯುವುದಿಲ್ಲ: 

ನಾನು ಕಾಂಗ್ರೆಸ್ ಪಕ್ಷದಿಂದಲೇ ಬೆಳೆದವಳು. ನಾನು ಪಕ್ಷ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನನ್ನ ಪುಸ್ತಕ ನನ್ನ ಜೀವನ ಚರಿತ್ರೆ ಇದೆಯೋ ಹೊರತು ಕಾಂಗ್ರೆಸ್‌ನ ಚರಿತ್ರೆ ಅಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News