×
Ad

ದಕ್ಷಿಣ ಸುಡಾನ್: ಬಂಡುಕೋರರಿಂದ ಇಬ್ಬರು ಭಾರತೀಯ ಇಂಜಿನಿಯರ್ ಅಪಹರಣ

Update: 2017-03-11 21:43 IST

ಕಂಪಾಲ (ಉಗಾಂಡ), ಮಾ. 11: ಇಬ್ಬರು ಭಾರತೀಯ ಇಂಜಿನಿಯರ್‌ಗಳನ್ನು ತಾನು ಅಪಹರಿಸಿರುವುದಾಗಿ ದಕ್ಷಿಣ ಸುಡಾನ್‌ರ ಬಂಡುಕೋರ ಪ್ರತಿಪಕ್ಷ ಹೇಳಿದೆ. ಅವರು ಸರಕಾರದೊಂದಿಗೆ ಶಾಮೀಲಾಗಿ ಕೆಲಸ ಮಾಡುತ್ತಿದ್ದರು ಎಂದು ಅದು ಆರೋಪಿಸಿದೆ.

ಇಂಜಿನಿಯರ್‌ಗಳನ್ನು ಮೇಲಿನ ನೈಲ್ ರಾಜ್ಯದಲ್ಲಿ ಅಪಹರಿಸಲಾಗಿದೆಯಾದರೂ, ಯಾವಾಗ ಈ ಘಟನೆ ಸಂಭವಿಸಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ಪ್ರತಿಪಕ್ಷ ನಾಯಕ ರೀಕ್ ಮಚರ್ ನಿರ್ಧಾರವೊಂದನ್ನು ತೆಗೆದುಕೊಳ್ಳುವವರೆಗೆ ಅವರನ್ನು ವಶದಲ್ಲಿ ಇಟ್ಟುಕೊಳ್ಳಲಾಗುವುದು ಎಂದು ಪ್ರತಿಪಕ್ಷ ವಕ್ತಾರ ವಿಲಿಯಮ್ ಗಟ್‌ಜಿಯಾತ್ ಶನಿವಾರ ತಿಳಿಸಿದರು. ರೀಕ್ ಮಚರ್ ದಕ್ಷಿಣ ಆಫ್ರಿಕದಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ.

ಒತ್ತೆಹಣ ಅಥವಾ ಇತರ ಬೇಡಿಕೆಗಳನ್ನು ಮುಂದಿಡುವ ಸಾಧ್ಯತೆಯಿಲ್ಲ ಎಂದು ಇನ್ನೋರ್ವ ಪ್ರತಿಪಕ್ಷ ವಕ್ತಾರ ಮಬಿಯೊರ್ ಗರಂಗ್ ಹೇಳಿದ್ದಾರೆ. ‘‘ಅದು ನಮ್ಮ ಉದ್ದೇಶವಲ್ಲ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News