ಹೈನುಗಾರರಿಂದ ಒಕ್ಕೂಟದ ಮುನ್ನಡೆ: ರವಿರಾಜ ಹೆಗ್ಡೆ
ಹೆಬ್ರಿ, ಮಾ.11: ಗ್ರಾಮೀಣ ಪ್ರದೇಶದಲ್ಲಿ ಹೈನುಗಾರರು ಪಡುವ ಶ್ರಮದ ಫಲವಾಗಿ ಹಾಲು ಒಕ್ಕೂಟ ಯಶಸ್ವಿಯಾಗಿ ಮುನ್ನಡೆದು ಅತ್ಯುತ್ತಮ ಒಕ್ಕೂಟವಾಗಿ ಮೂಡಿ ಬರಲು ಸಾಧ್ಯವಾಗಿದೆ. ರೈತ ಬಂಧುಗಳು ಇನ್ನಷ್ಟು ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡಿ, ತಾವೂ ಕೂಡ ಚೈತನ್ಯದಿಂದ ಬದುಕಬೇಕು, ಸರ್ಕಾರ ಮತ್ತು ಒಕ್ಕೂಟ ನಿರಂತರವಾಗಿ ರೈತರ ಕೈಹಿಡಿಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದರು.
ಅವರು ಶನಿವಾರ ಹೆಬ್ರಿಯ ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸಾಂದ್ರಶೀತಲೀಕರಣ ಘಟಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ವಿದ್ಯುತ್ ಜನಕವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾರ್ಕಳ ತಾಲೂಕಿನ ಎಲ್ಲ ಡೇರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಪ್ರಯೋಗಾಲಯವನ್ನು ಉದ್ಘಾಟಿಸಿದ ಕಾರ್ಕಳ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ಯಾನ ಡೇರಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್, ಡೇರಿಯ ಇನ್ನಷ್ಟು ಅಭಿವೃದ್ದಿಗೆ ಸಹಕಾರ ನೀಡುವಂತೆ ಮನವಿ ಮಾಡಿ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಷತೆ ಸಲ್ಲಿಸಿದರು.
ಹಾಲು ಒಕ್ಕೂಟದ ನಿರ್ದೇಶಕರಾದ ಅಶೋಕ್ ಕುಮಾರ ಶೆಟ್ಟಿ, ನವೀನಚಂದ್ರ ಜೈನ್, ಉದಯ ಎಸ್.ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ್ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ ಶೆಟ್ಟಿ, ಹೆಬ್ರಿ ಪಂಚಾಯಿತಿ ಅಧ್ಯಕ್ಷ ಸುಧಾಕರ ಹೆಗ್ಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವೀಚಾರಕ ಹರೀಶ್ ಆಚಾರ್ಯ, ಡೇರಿಯ ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ನಿರ್ದೇಶಕರಾದ ಎಚ್. ಜಯಕರ ಪೂಜಾರಿ, ರಮೇಶ ಶೆಟ್ಟಿ, ದಿನಕರ ಶೆಟ್ಟಿ, ನಾರಾಯಣ ಪ್ರಭು, ಚೆನ್ನಯ್ಯ ಪೂಜಾರಿ, ಕೆ.ಎಸ್.ನರಸಿಂಹ, ಕೃಷ್ಣ ನಾಯ್ಕಿ, ಸುಶೀಲ ಶೆಟ್ಟಿ, ಬೇಬಿ ಪೂಜಾರಿ, ಕಾರ್ಯದರ್ಶಿ ಅರುಣ್ ಶೆಟ್ಟಿ, ಹಾಲು ಪರೀಕ್ಷಕಿ ದೀಪಾ ಶೆಟ್ಟಿ, ಸಹಾಯಕಿ ಸುಮಿತ್ರಾ, ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ಡಾ.ಅನಿಲ್ ಕುಮಾರ್ ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಶಂಕರ ನಾಯ್ಕಾ, ಡಾ.ಧನಂಜಯ್ ಉಪಸ್ಥಿತರಿದ್ದರು.
ಮುದ್ರಾಡಿ ಕೃಷಿ ಉತ್ಸವದಲ್ಲಿ ಪ್ರಶಸ್ತಿ ಗಳಿಸಿದ ನಾರಾಯಣ ಪ್ರಭು, ಸದಾಶಿವ ಕುಲಾಲ್, ಪ್ರಕಾಶ ಶೆಟ್ಟಿ ಅವರಿಗೆ ಅಭಿನಂದನ ಪತ್ರ ನೀಡಲಾಯಿತು. ಬೇಳಂಜೆಯ ಲಕ್ಷ್ಮೀ ಪೂಜಾರಿ ಮತ್ತು ಹೆಬ್ರಿಯ ನಾಗರಾಜ ಭಂಡಾರಿ ಅವರಿಗೆ ರೈತ ಕಲ್ಯಾಣ ಟ್ರಸ್ಟ್ ನಿಂದ ಪರಿಹಾರ ಧನ ನೀಡಲಾಯಿತು.
ಶಂಕರ ನಾಯ್ಕ ಕಾರ್ಯಕ್ರಮ ನಿರೂಪಿಸಿ ಅರುಣ್ ಶೆಟ್ಟಿ ವಂದಿಸಿದರು