ನಾಳೆಯಿಂದ ಕೊರಗ ಮಕ್ಕಳಿಗೆ ವಿಶೇಷ ಕಲಿಕಾ ಶಿಬಿರ

Update: 2017-03-11 18:18 GMT

ಉಡುಪಿ, ಮಾ.11: ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಯ 10ನೆ ತರಗತಿಯಲ್ಲಿ ಕಲಿಯುತ್ತಿರುವ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಮಾ.13ರಿಂದ 19ರವರೆಗೆ ಸನಿವಾಸ ವಿಶೇಷ ಕಲಿಕಾ ಶಿಬಿರವನ್ನು ಆದಿಉಡುಪಿ ಪ್ರೌಢಶಾಲೆ ಆದಿ ಉಡುಪಿ ಹಾಗೂ ಕುಂದಾಪುರ ವಲಯದ ಮಕ್ಕಳ ಮನೆ ಕುಂಭಾಶಿಯಲ್ಲಿ ಆಯೋಜಿಸಲಾಗಿದೆ.

ಬೈಂದೂರು, ಕುಂದಾಪುರ ಹಾಗೂ ಬ್ರಹ್ಮಾವರ ವಲಯದ ಪ್ರೌಢ ಶಾಲೆಗಳ 10ನೆ ತರಗತಿಯ ಕೊರಗ ಸಮುದಾಯದ ವಿದ್ಯಾರ್ಥಿಗಳನ್ನು ಮಕ್ಕಳ ಮನೆ ಕುಂಭಾಶಿಯಲ್ಲಿ ನಡೆಯುವ ಶಿಬಿರಕ್ಕೆ ಹಾಗೂ ಕಾರ್ಕಳ, ಉಡುಪಿ ಮತ್ತು ಬ್ರಹ್ಮಾವರ ವಲಯದ ಶಾಲೆಗಳ ವಿದ್ಯಾರ್ಥಿಗಳನ್ನು ಆದಿಉಡುಪಿ ಪ್ರೌಢಶಾಲೆ ಆದಿ ಉಡುಪಿ ಇಲ್ಲಿ ನಡೆಯುವ ಶಿಬಿರಕ್ಕೆ ಈಗಾಗಲೇ ತಿಳಿಸಿರುವ ಪ್ರಕಾರ ಕರೆರಲು ಸಂಬಂಸಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News