×
Ad

ವೇತನ ಪಾವತಿಗೆ ಆಗ್ರಹಿಸಿ ಧರಣಿ

Update: 2017-03-12 00:00 IST

ಪಡುಬಿದ್ರೆ, ಮಾ.11: ಐದು ತಿಂಗಳಿನಿಂದ ನೀಡದ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕೆಂದು ಆಗ್ರಹಿಸಿ ಕಾರ್ಕಳ ರಸ್ತೆಯಲ್ಲಿರುವ ನವಯುಗ ಕಂಪೆನಿಯ ನೌಕರರು ಕಚೇರಿ ಎದುರು ಧರಣಿ ನಡೆಸಿದ ಘಟನೆ ಶನಿವಾರ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಗುತ್ತಿಗೆ ನಡೆಸುತ್ತಿರುವ ನವಯುಗ ಕಂಪೆನಿಯು ನೌಕರರಿಗೆ ಐದು ತಿಂಗಳಿಂದ ವೇತನ ನೀಡದ ಕಾರಣ 200ಕ್ಕೂ ಅಕ ಮಂದಿ ನೌಕರರು ಕಂಪೆನಿಯ ಕಚೇರಿ ಎದುರು ಧರಣಿ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಂಪೆನಿಯ ಉಸ್ತುವಾರಿ ಭಾಸ್ಕರ್, ವೇತನ ಬ್ಯಾಂಕ್‌ಗೆ ಬಂದು ಬಾಕಿಯಾಗಿವೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಣಪಾವತಿಸಲು ವಿಳಂಬವಾಗಿದೆ. ಸೋಮವಾರ ಎಲ್ಲರಿಗೂ ವೇತನ ಪಾವತಿಸಲಾಗುವುದು. ಯಾರೂ ಆತಂಕ ಪಡಬೇಡಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News