ನ್ಯಾ.ಅಬ್ದುಲ್ ನಝೀರ್‌ರಿಗೆ ಹುಟ್ಟೂರ ಗೌರವ
ಮೂಡುಬಿದಿರೆ, ಮಾ.11: ಸುಪ್ರೀಂ ಕೋರ್ಟು ನ್ಯಾಯಾೀಶರಾಗಿ ನೇಮಕಗೊಂಡ ನ್ಯಾ.ಅಬ್ದುಲ್ ನಝೀರ್‌ರಿಗೆ ಮೂಡುಬಿದಿರೆ ವಕೀಲರ ಸಂಘದ ವತಿಯಿಂದ ಶನಿವಾರ ಹುಟ್ಟೂರ ಗೌರವ ಸಮರ್ಪಿಸಲಾಯಿತು.
ಇಲ್ಲಿನ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ಹೈಕೋರ್ಟ್ ನ್ಯಾಯಾೀಶ ಹಾಗೂ ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಾೀಶ ಎ.ಎಸ್.ವೇಣುಗೋಪಾಲ ಗೌಡ ವಹಿಸಿದ್ದರು.
ಹೈಕೋರ್ಟ್ ನ್ಯಾಯಾೀಶರಾದ ಎ.ಎಸ್.ಬೋಪಣ್ಣ, ಜಾನ್ ಮೈಕಲ್ ಡಿಕುನ್ಹ, ನ್ಯಾಯವಾದಿ ಎಂ.ಕೆ.ವಿಜಯ ಕುಮಾರ್ ಸನ್ಮಾನಿತರ ಕುರಿತು ಮಾತನಾಡಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾೀಶ ಎ.ಎಸ್. ಬೀಳಗಿ, ಮೂಡುಬಿದಿರೆ ನ್ಯಾಯಾಲಯದ ನ್ಯಾಯಾೀಶೆ ಅರುಣಾ ಕುಮಾರಿ, ಮೂಡುಬಿದಿರೆ ವಕೀಲಯ ಸಂಘದ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಲೋಬೊ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತನ್ನ ಕಾಲೇಜು ಗುರು, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್‌ರನ್ನು ಅಬ್ದುಲ್ ನಝೀರ್ ಸನ್ಮಾನಿಸಿದರು. ಬಾಹುಬಲಿ ಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನ್ಯಾಯವಾದಿ ಕೆ.ಆರ್.ಪಂಡಿತ್ ಸನ್ಮಾನ ಪತ್ರ ವಾಚಿಸಿದರು. ಪ್ರವೀಣ್ ಲೋಬೊ ವಂದಿಸಿದರು. ನ್ಯಾಯವಾದಿ ಶ್ವೇತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.