ಜಾರುಬಂಡಿ ಮತ್ತು ಶಾಲಾ ಮಟ್ಟದ 'ಹಲೋ ಇಂಗ್ಲಿಷ್' ಉದ್ಘಾಟನೆ
ವರ್ಕಾಡಿ, ಮಾ.12: ಮುಡೂರುತೋಕೆಯ ಶ್ರೀ ಸುಬ್ರಹ್ಮಣ್ಯ ಎ.ಎಲ್.ಪಿ. ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಜಾರುಬಂಡಿ ಹಾಗೂ 'ಹಲೋ ಇಂಗ್ಲಿಷ್'ನ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರಗಿತು.
ಜಾರುಬಂಡಿಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಉದ್ಘಾಟಿಸಿದರೆ, 'ಹಲೋ ಇಂಗ್ಲಿಷ್'ನ ಉದ್ಘಾಟನೆಯನ್ನು ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ನೆರವೇರಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಾರ್ಡ್ ಸದಸ್ಯೆ ಜೆಸಿಂತ ಡಿಸೋಜ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ತೃಶಾಂತ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಸ್ತಫಾ ತೋಕೆ, ಶಾಲಾ ಮ್ಯಾನೇಜರ್ ದೇವಪ್ಪ ಶೆಟ್ಟಿ ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಂಜೇಶ್ವರ ಉಪಜಿಲ್ಲೆಯ ಬಿಪಿಒ ವಿಜಯ ಕುಮಾರ್ ಅತಿಥಿಯಾಗಿದ್ದರು.
ಶಾಲಾ ಮುಖ್ಯಶಿಕ್ಷಕಿ ಚಂದ್ರಾವತಿ ಸ್ವಾಗತಿಸಿದರು. 'ಹಲೋ ಇಂಗ್ಲಿಷ್'ನ ಭಾಗವಾಗಿ ಶಾಲಾ ಶಿಕ್ಷಕಿ ಚಿತ್ರಾ ಮಕ್ಕಳಿಗೆ ತರಬೇತಿಯನ್ನು ನೀಡಿದರು. ಶಾಲಾ ಶಿಕ್ಷಕ ಶೈಲೇಶ್ ವಂದಿಸಿದರು.