×
Ad

‘ಇ-ಮೆನ್ ಎಕ್ಸ್‌ಕ್ಲ್ಲೂಸಿವ್’ ಮತ್ತು ‘ಐಸ್ ಫ್ಯಾಕ್ಟರಿ’ ಶುಭಾರಂಭ

Update: 2017-03-12 11:46 IST

ಮಂಗಳೂರು, ಮಾ.12: ನಗರದ ಫಳ್ನೀರ್ ರಸ್ತೆಯ ಅಥೆನಾ ಆಸ್ಪತ್ರೆ ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಲಾದ ನೂತನ ಬಟ್ಟೆ ಮಳಿಗೆ ‘ಇ-ಮೆನ್ ಎಕ್ಸ್‌ಕ್ಲೂಸಿವ್’ ಮತ್ತು ಐಸ್‌ಕ್ರೀಮ್ ಪಾರ್ಲರ್ ‘ಐಸ್ ಫ್ಯಾಕ್ಟರಿ’ಯು ರವಿವಾರ ಬೆಳಗ್ಗೆ ಶುಭಾರಂಭಗೊಂಡಿತು.

‘ಇ-ಮೆನ್ ಎಕ್ಸ್‌ಕ್ಲ್ಲೂಸಿವ್’ ಮತ್ತು ‘ಐಸ್ ಫ್ಯಾಕ್ಟರಿ’ಯ ಮಾಲಕ ಮುಹಮ್ಮದ್ ನಾಸಿರ್‌ರ ತಂದೆ ಯೂಸುಫ್ ಹಾಜಿ ಕೋಡಿಬೈಲ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮಾತನಾಡಿ, ಪರಿವರ್ತನೆ ನಿತ್ಯ ಮತ್ತು ನಿರಂತರವಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿಯಾಗುತ್ತಿರುವ ಈ ಸಂದರ್ಭ ಇಂತಹ ಮಳಿಗೆಗಳು ಹೆಚ್ಚು ಆವಶ್ಯಕವಾಗಿದೆ. ಇದರ ಸದುಪಯೋಗವನ್ನು ಉಡುಪು ಪ್ರಿಯರು ಪಡೆಯಬೇಕಾಗಿದೆ ಎಂದರು.

ಶಾಲಿಮಾರ್ ಗ್ರೂಫ್‌ನ ಬಶೀರ್ ಅಹ್ಮದ್ ಮಾತನಾಡಿ, ವ್ಯಾಪಾರವು ಕೇವಲ ಹಣ ಗಳಿಕೆಯ ಉದ್ದೇಶವಾಗಿರಬಾರದು. ವ್ಯಾಪಾರದಲ್ಲಿ ಪ್ರೀತಿ ಮತ್ತು ವಿಶ್ವಾಸ ಮುಖ್ಯವಾಗಿದೆ. ಮಾನವೀಯ ಸಂಬಂಧದ ಕೊಂಡಿಯಾಗಿರುವ ವ್ಯಾಪಾರದಲ್ಲಿ ನಗುಮುಖದ ಸೇವೆ ನೀಡುವುದು ಮುಖ್ಯವಾಗಿದೆ. ಖರೀದಿಗೆ ಬರುವ ಎಲ್ಲ ಗ್ರಾಹಕರನ್ನು ಗೌರವ, ಪ್ರೀತಿ, ನಗುವಿನೊಂದಿಗೆ ಸ್ವಾಗತಿಸುವುದು ವ್ಯಾಪಾರಿಯ ಕರ್ತವ್ಯವಾಗಲಿ. ಅಲ್ಲಾಹನ ಅನುಗ್ರಹದಿಂದ ತೆರೆಯಲ್ಪಟ್ಟ ಈ ಮಳಿಗೆ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ಕ್ರೆಡೈ ರಾಜ್ಯ ಜತೆ ಕಾರ್ಯದರ್ಶಿ ಪುಷ್ಪರಾಜ ಜೈನ್ ಮಾತನಾಡಿ ಮಂಗಳೂರು ದೇಶದ ಪ್ರತಿಷ್ಠಿತ ನಗರಗಳಲ್ಲೊಂದು ಎಂದು ಹೆಸರುವಾಸಿಯಾಗಿದೆ. ಜಗತ್ತಿನ ವಿವಿಧ ಬ್ರಾಂಡ್‌ನ ಬಟ್ಟೆಬರೆಗಳು ಇಲ್ಲಿ ಲಭ್ಯವಾಗುತ್ತಿರುವುದು ಸಂತಸದ ವಿಚಾರ. ಈ ಮಳಿಗೆಯು ಯುವಜನಾಂಗದ ಕಣ್ಮನ ಸೆಳೆಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಜೆ.ಆರ್.ಲೋಬೊ, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಎಸ್‌ಕೆಎಸ್‌ಎಂ ಅಧ್ಯಕ್ಷ ಯು. ಎನ್. ಅಬ್ದುರ್ರಝಾಕ್, ಟ್ಯಾಕ್ಸ್ ಕನ್ಸಲ್ಟಂಟ್ ಅಬ್ದುಲ್ ಖಾದರ್, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಅಬ್ದುಲ್ ರವೂಫ್, ಅಬ್ದುಲ್ ಮಜೀದ್ ಶಾಲಿಮಾರ್, ಅಬ್ದುರ್ರಹೀಂ ಶಾಲಿಮಾರ್, ಕಬೀರ್ ಶಾಲಿಮಾರ್, ರಫೀಕ್ ಶಾಲಿಮಾರ್, ಎಂ.ಎ.ಶರೀಫ್, ಎಂ.ಎ.ರಶೀದ್, ಅರಾಫತ್, ಜಿ.ಮುಸ್ತಫಾ ಭಾಗವಹಿಸಿದ್ದರು. ಸಹಲ್ ಮತ್ತು ಝಯಾಮ್ ಕಿರಾಅತ್ ಪಠಿಸಿದರು.

# ಮಾನ್ಯವರ್, ಬ್ಲಾಕ್ಬರೀಸ್, ಲೂಯಿ ಫಿಲಿಪ್ಪ್, ಇಂಡಿಯನ್ ಟೆರೈನ್, ಲೀ, ರೆಡಿ, ಕಿಲ್ಲರ್, ಜೆ. ಹ್ಯಾಂಪ್ಸ್ ಸ್ಟ್ ಡ್, ಸಿನ್, ಮೋಂಟೆ ಕಾರ್ಲೊ, ಲೈವ್‌ಇನ್, ಝಡ್ ತ್ರೀ, ರೊಡೈಕ್, ಮಾರ್ಕ್ ಅಂಡರ್‌ಸನ್, ಮಫ್ತಿ, ಬೀವೀ, ಒಕ್ಸಂಬರ್ಗ್, ಜೋಕಿ, ರೇಝರ್, ಪರ್ಫ್ಯೂಮ್ಸ್ ಮೊದಲಾದ ಖ್ಯಾತ ಬ್ರಾಂಡ್ ಗಳ ಬಟ್ಟೆಬರೆಗಳ  ವೈವಿಧ್ಯಮಯ ಸಂಗ್ರಹ  ‘ಇ-ಮೆನ್ ಎಕ್ಸ್‌ಕ್ಲ್ಲೂಸಿವ್’ನಲ್ಲಿ ಲಭ್ಯವಿವೆ ಎಂದು ಮಾಲಕ ಮುಹಮ್ಮದ್ ನಾಸಿರ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News