ವಂಚನೆ ಪ್ರಕರಣಗಳು:ಅಗ್ರಸ್ಥಾನಗಳಲ್ಲಿ ಐಸಿಐಸಿಐ, ಎಸ್‌ಬಿಐ ಮತ್ತು ಸ್ಟಾನ್‌ಚಾರ್ಟ್ ಬ್ಯಾಂಕ್

Update: 2017-03-12 09:42 GMT

ಹೊಸದಿಲ್ಲಿ,ಮಾ.12: 2016,ಎಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಐಸಿಐಸಿಐ ಬ್ಯಾಂಕಿನಲ್ಲಿ ಅತ್ಯಂತ ಹೆಚ್ಚಿವ ವಂಚನೆ ಪ್ರಕರಣಗಳು ನಡೆದಿದ್ದು, ಸರಕಾರಿ ಸ್ವಾಮ್ಯದ ಎಸ್‌ಬಿಐ ಎರಡನೇ ಸ್ಥಾನದಲ್ಲಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ.

2016-17ನೇ ಹಣಕಾಸು ವರ್ಷದ ಮೊದಲ ಒಂಭತ್ತು ತಿಂಗಳುಗಳಲ್ಲಿ ಐಸಿಐಸಿಐ ಬ್ಯಾಂಕಿನಲ್ಲಿ ಒಂದು ಲ.ರೂ. ಮತ್ತು ಹೆಚ್ಚಿನ ಮೊತ್ತವನ್ನೊಳಗೊಂಡ 455 ವಂಚನೆ ಪ್ರಕರಣಗಳು ಪತ್ತೆಯಾಗಿದ್ದರೆ, ನಂತರದ ಸ್ಥಾನಗಳಲ್ಲಿರುವ ಎಸ್‌ಬಿಐನಲ್ಲಿ 429, ಸ್ಟಾನ್‌ಚಾರ್ಟ್ ಬ್ಯಾಂಕಿನಲ್ಲಿ 244 ಮತ್ತು ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ 237 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.

ಅಧಿಕ ಸಂಖ್ಯೆಯ ವಂಚನೆ ಪಕರಣಗಳು ವರದಿಯಾಗಿರುವ ಇತರ ಬ್ಯಾಂಕುಗಳಲ್ಲಿ ಎಕ್ಸಿಸ್ ಬ್ಯಾಂಕ್(189), ಬ್ಯಾಂಕ್ ಆಫ್ ಬರೋಡಾ(176) ಮತ್ತು ಸಿಟಿಬ್ಯಾಂಕ್ (150) ಸೇರಿವೆ.

ಆದರೆ ವಂಚನೆಗೊಳಗಾದ ಮೊತ್ತದ ಪಟ್ಟಿಯಲ್ಲಿ ಎಸ್‌ಬಿಐ(2,236.81 ಕೋ.ರೂ.), ಪಂಜಾಬ್ ನ್ಯಾಷನಲ್ ಬ್ಯಾಂಕ್ (2,250.34 ಕೋ) ಮತ್ತು ಎಕ್ಸಿಸ್ ಬ್ಯಾಂಕ್ (1998.49 ಕೋ.) ಮುಂಚೂಣಿಯಲ್ಲಿವೆ.

 ಆರ್‌ಬಿಐ ವಿತ್ತ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯು ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್ ಸಿಬ್ಬಂದಿಗಳು ಭಾಗಿಯಾಗಿರುವುದನ್ನೂ ಬಹಿರಂಗಗೊಳಿಸಿದೆ.

ಎಸ್‌ಬಿಐನ 64 ಸಿಬ್ಬಂದಿಗಳು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಇಂತಹವರ ಸಂಖ್ಯೆ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ 49 ಮತ್ತು ಎಕ್ಸಿಸ್ ಬ್ಯಾಂಕಿನಲ್ಲಿ 35 ಆಗಿದೆ.

2016,ಎಪ್ರಿಲ್-ಡಿಸೆಂಬರ್ ಅವಧಿಯಲ್ಲಿ ವಿವಿಧ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಒಟ್ಟು 450 ಸಿಬ್ಬಂದಿಗಳು 3,870 ವಂಚನೆ ಪ್ರಕರಣಗಳಲ್ಲಿ ಭಾಗಿ ಯಾಗಿದ್ದು, ಒಟ್ಟು ಮೊತ್ತ 17,750.27 ಕೋ.ರೂ.ಗಳಾಗಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News