ಕೇರಳದಲ್ಲಿ ಪವರ್ ಕಟ್ ಇಲ್ಲ: ಸಚಿವ ಎಂ.ಎಂ.ಮಣಿ
ಕಾಸರಗೋಡು, ಮಾ.12: ರಾಜ್ಯದಲ್ಲಿ ವಿದ್ಯುತ್ ಕಡಿತಕ್ಕೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಕೇರಳ ವಿದ್ಯುತ್ ಸಚಿವ ಎಂ.ಎಂ.ಮಣಿ ಹೇಳಿದರು.
ಕಾಸರಗೋಡು ಕೇಳುಗುಡ್ಡೆಯಲ್ಲಿ ನೂತನ ವಿದ್ಯುತ್ ಸಬ್ ಸ್ಟೇಷನ್ ಅನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ವಿದ್ಯುತ್ ಉತ್ಪಾದನೆಗಿ ನೀರಿನ ಕೊರತೆ ಎದುರಾಗಿದೆ. ಆದರೂ ವಿದ್ಯುತ್ ಕಡಿತ ಹಾಗೂ ಲೋಡ್ ಶೆಡ್ಡಿಂಗ್ ನಡೆಸುವ ಯಾವುದೇ ಉದ್ದೇಶ ಸರಕಾರ ಹೊಂದಿಲ್ಲ ಎಂದರು.
ಕಾಸರಗೋಡು ಜಿಲ್ಲೆಯ ವಿದ್ಯುತ್ ಸಮಸ್ಯೆಗೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.
ಕೆಎಸ್‌ಇಬಿ ನಿರ್ದೇಶಕ ಡಾ.ವಿ.ಶಿವದಾಸನ್, ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹೀಂ, ಮಾಜಿ ಶಾಸಕ ಸಿ.ಎಚ್.ಕುಂಞಬು, ಕೆ.ಪಿ.ಸತೀಶ್ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.
ಸೀತಾಂಗೋಳಿಯಲ್ಲಿ ವಿದ್ಯುತ್ ಉಪ ಸೆಕ್ಷನ್ ಕಚೇರಿಯನ್ನು ಸಚಿವ ಎಂ.ಎಂ.ಮಣಿ ಉದ್ಘಾಟಿಸಿದರು.
ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಬದಿಯಡ್ಕ ಪಂಚಾಯತ್ ಅಧ್ಯಕ್ಷ ಕೆ.ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.