×
Ad

ಯೋಗೇಶ್ ಮಾಸ್ಟರ್ ಹಲ್ಲೆ ಖಂಡನೀಯ: ವೆಲ್ಫೇರ್ ಪಾರ್ಟಿ

Update: 2017-03-12 20:46 IST

ಮಂಗಳೂರು, ಮಾ.12: ದಾವಣಗೆರೆಯಲ್ಲಿ  ಬರಹಗಾರ ಮತ್ತು ಪ್ರಗತಿ ಪರ ಚಿಂತಕ ಯೊಗೇಶ್ ಮಾಸ್ಟರ್  ಮೇಲೆ ಮಸಿ ಎರಚಿ ಹಲ್ಲೆ ಮಾಡಿರುವುದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡಿಸಿದೆ.

ವೈಚಾರಿಕ ಬಿನ್ನಭಿಪ್ರಾಯಗಳನ್ನು ಸಂವಾದದಲ್ಲಿ ಬಗೆಹರಿಸಬೇಕೆ ಹೊರತು ಹಲ್ಲೆ ನಡೆಸುವುದಲ್ಲ. ಸಂಘ ಪರಿವಾರ ವೈಚಾರಿಕವಾಗಿ ಸೋತಿದೆ, ಬೆದರಿಸುವ ತಂತ್ರವನ್ನು ಅನುಸರಿಸಿ ಅಸ್ತಿತ್ವವನ್ನು ಸಾಬೀತು ಪಡಿಸುತ್ತಿದೆ. ಸಂಘ ಪರಿವಾರದ ಪುಂಡರನ್ನು ನಿಯಂತ್ರಿಸಲು ರಾಜ್ಯ ಸರಕಾರ ಸಂಪೂರ್ಣ ವಿಫಲಗೊಂಡಿದೆ ಎಂಬುವುದಕ್ಕೆ ಇತ್ತೀಚಿನ ಬಹಳಷ್ಟು ಉದಾಹರಣೆಗಳು ಸಾಕ್ಷಿಗಳಾಗಿವೆ ಎಂದು ವೆಲ್ಫೇರ್ ಪಾರ್ಟಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News