ಫೆಲೆಸ್ತೀನ್ ನೆಲದಲ್ಲಿ ಇಸ್ರೇಲ್‌ನ ಬಡಾವಣೆಗೆ ಹಾಲಿವುಡ್ ನಟ ಗೇರ್ ಖಂಡನೆ

Update: 2017-03-12 15:21 GMT

ಜೆರುಸಲೇಂ, ಮಾ. 12: ಫೆಲೆಸ್ತೀನ್ ದೇಶ ನಿರ್ಮಿಸಲು ಅಗತ್ಯ ಎಂಬುದಾಗಿ ಅಲ್ಲಿನ ನಿವಾಸಿಗಳು ಬಯಸುವ ಜಮೀನುಗಳಲ್ಲಿ ಮನೆಗಳ ಬಡಾವಣೆಗಳನ್ನು ನಿರ್ಮಿಸುವ ಇಸ್ರೇಲ್‌ನ ಕ್ರಮವನ್ನು ಹಾಲಿವುಡ್ ನಟ ರಿಚರ್ಡ್ ಗೇರ್ ಖಂಡಿಸಿದ್ದಾರೆ.

ಇಸ್ರೇಲಿ ಲೇಖಕ-ನಿರ್ದೇಶಕ ಜೋಸೆಫ್ ಸೆಡಾರ್ ನಿರ್ಮಾಣದ ನೂತನ ಚಿತ್ರದ ಸ್ಥಳೀಯ ಪ್ರೀಮಿಯರ್‌ನಲ್ಲಿ ಭಾಗವಹಿಸಲು ಜೆರುಸಲೇಂಗೆ ಬಂದಿದ್ದ ವೇಳೆ ಗೇರ್ ಇಸ್ರೇಲ್ ಕುರಿತ ತನ್ನ ಅತೃಪ್ತಿಯನ್ನು ಹೊರಹಾಕಿದರು.

‘‘ಬಡಾವಣೆಗಳು ಪ್ರಚೋದನೆಯಾಗಿದೆ ಹಾಗೂ ಪ್ರಾಮಾಣಿಕ ಶಾಂತಿ ಪ್ರಕ್ರಿಯೆಯನ್ನು ಬಯಸುವ ವ್ಯಕ್ತಿಗಳು ಈ ನೀತಿಯನ್ನು ಅನುಸರಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿರುವುದಾಗಿ ‘ಹಾರೆಝ್’ ಪತ್ರಿಕೆ ರವಿವಾರ ವರದಿ ಮಾಡಿದೆ.

‘ಪ್ರಿಟಿ ವೂಮನ್’ ಎಂಬ ಚಿತ್ರದಲ್ಲಿನ ಅವರ ನಟನೆಯು ಪ್ರಸಿದ್ಧವಾಗಿದೆ.ಉಭಯ ದೇಶಗಳ ನಡುವಿನ ಭೂವಿವಾದದ ದ್ವಿರಾಷ್ಟ್ರ ಪರಿಹಾರಕ್ಕೆ ಇಸ್ರೇಲ್‌ನ ಬಡಾವಣೆಗಳು ಅಡ್ಡಿಯಾಗುತ್ತದೆ ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯ ಭಾವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News