ಕಾಸರಗೋಡು: ಚಿಕಿತ್ಸಾ ಲೋಪದಿಂದ ಎಂಡೋಸಲ್ಫಾನ್ ಸಂತ್ರಸ್ಥ ಯುವಕ ಸಾವು
Update: 2017-03-12 20:59 IST
ಕಾಸರಗೋಡು, ಮಾ.12: ಚಿಕಿತ್ಸಾ ಲೋಪದಿಂದ ಎಂಡೋಸಲ್ಫಾನ್ ಸಂತ್ರಸ್ಥ ಯುವಕ ಮೃತಪಟ್ಟ ಘಟನೆ ಕಾಞ೦ಗಾಡ್ ನಲ್ಲಿ ನಡೆದಿದೆ.
ಪನತ್ತಡಿ ಕನ್ನಿಯಂದರದ ಜೀನ್ಸ್ ಮ್ಯಾಥ್ಯೂ ( 22) ಮೃತಪಟ್ಟವರು. ಚುಳ್ಳಿಕರೆ ಸೈ೦ಟ್ ಜೋಸ್ಪೈನ್ ವಿಶೇಷ ಶಾಲೆಯ ವಿದ್ಯಾರ್ಥಿಯಾಗಿದ್ದನು.
ಮಾ.4ರಂದು ಈತನನ್ನು ಚಿಕಿತ್ಸೆಗಾಗಿ ಕಾಞ೦ಗಾಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಶಸ್ತ್ರಕ್ರಿಯೆ ನಡೆಸಬೇಕೆಂದು ಮನೆಯವರಿಗೆ ತಿಳಿಸಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಶಸ್ತ್ರಕ್ರಿಯೆ ನಡೆಸಲಾಗಿತ್ತು ಎನ್ನಲಾಗಿದೆ.
ಬಳಿಕ ಗಂಭೀರ ಸ್ಥಿತಿಗೆ ತಲಪಿದ್ದ ಈತ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಕಾಞoಗಾಡ್ ಖಾಸಗಿ ಆಸ್ಪತ್ರೆಯ ನಿರ್ಲಕ್ಷ ಸಾವಿಗೆ ಕಾರಣ ಎಂದು ಮನೆಯವರು ಆರೋಪಿದ್ದಾರೆ.
ಈ ಕುರಿತು ಡಿವೈಎಸ್ಪಿಗೆ ದೂರು ನೀಡಲಾಗಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.