ಪಾಕ್ ಸೇನೆಗೆ ಚೀನಾದ ಕ್ಷಿಪಣಿ ಸೇರ್ಪಡೆ

Update: 2017-03-12 15:55 GMT

 ಇಸ್ಲಾಮಾಬಾದ್, ಮಾ. 12: ಪಾಕಿಸ್ತಾನ ತನ್ನ ವಾಯು ರಕ್ಷಣೆಯನ್ನು ಹೆಚ್ಚಿಸಲು ಹಾಗೂ ಎದುರಾಗುತ್ತಿರುವ ಬೆದರಿಕೆಗಳನ್ನು ಎದುರಿಸಲು ಚೀನಾ ನಿರ್ಮಿತ ಸುಧಾರಿತ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರವಿವಾರ ನಿಯೋಜಿಸಿದೆ.

‘‘ಪಾಕಿಸ್ತಾನ ಸೇನೆಯು ಮಧ್ಯಮ ಎತ್ತರದ ವಾಯು ರಕ್ಷಣಾ ವ್ಯವಸ್ಥೆ ಎಲ್‌ವೈ 80ರನ್ನು ನಿಯೋಜಿಸಿದೆ’’ ಎಂದು ಹೇಳಿಕೆಯೊಂದರಲ್ಲಿ ಸೇನೆ ತಿಳಿಸಿದೆ.

ರಾವಲ್ಪಿಂಡಿಯ ಸೇನಾ ಆಡಿಟೋರಿಯಂನಲ್ಲಿ ನಡೆದ ನಿಯೋಜನೆ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವ ಮುಖ್ಯ ಅತಿಥಿಯಾಗಿದ್ದರು.

ಎಲ್‌ವೈ-80 ಚೀನಾದ ಸಂಚಾರಿ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಮಧ್ಯಮ ಎತ್ತರದಲ್ಲಿ ಹಾರುವ ಯಾವುದೇ ವಸ್ತುಗಳನ್ನು ದೂರದಿಂದ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News