ಉಡುಪಿ: ಹಾಜಿ ಅಬ್ದುಲ್ಲಾರ ಕುರಿತ ಕೃತಿ ಬಿಡುಗಡೆ
ಉಡುಪಿ, ಮಾ.12: ಕಾರ್ಪೊರೇಶನ್ ಬ್ಯಾಂಕಿನ 112ನೆ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿ ಯಡಕ ರಚಿಸಿದ ಬ್ಯಾಂಕಿನ ಸ್ಥಾಪಕಾಧ್ಯಕ್ಷ ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಕುರಿತ ಕೃತಿಯ ಎರಡನೆ ಆವೃತ್ತಿಯನ್ನು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಇಂದು ಉಡುಪಿಯಲ್ಲಿ ಬಿಡುಗಡೆಗೊಳಿಸಿದರು.
ಹಾಜಿ ಅಬ್ದುಲ್ಲಾರ ಬಗ್ಗೆ ಜನಸಾಮಾನ್ಯರು ತಿಳಿದುಕೊಳ್ಳಬೇಕೆಂಬ ಉದ್ದೇಶ ದಿಂದ ಅವರ ಕುಟುಂಬಸ್ಥರು ಮುರಳೀಧರ ಉಪಾದ್ಯ ಬರೆದ ಪುಸ್ತಕವನ್ನು ಬಿಡುಗಡೆಗೊಳಿಸುವುತ್ತಿರುವುದು ಅವಿಸ್ಮರಣೀಯ. ಹಾಜಿ ಅಬ್ಬುಲ್ಲಾ ಬಡ ವರಿಗಾಗಿ ಹಾಗೂ ಸೌಹಾದರ್ತೆಗಾಗಿ ಶ್ರಮಿಸಿದವರು. ಇಂದು ಬಂಡವಾಳ ಶಾಹಿ ಹಾಗೂ ಕೋಮುವಾದಿಗಳು ದೇಶವನ್ನು ಆಳುತ್ತಿರುವ ಸಂದರ್ಭದಲ್ಲಿ ಹಾಜಿ ಅಬ್ದುಲ್ಲಾರ ಬಗ್ಗೆ ತಿಳಿದುಕೊಳ್ಳುವುದು ಅತಿಅಗತ್ಯ ಎಂದರು.
ಈ ಸಂದರ್ಭದಲ್ಲಿ ಹಾಜಿ ಅಬ್ದುಲ್ಲಾ ಸಾಹೇಬ್‌ರ ಸಂಬಂಧಿಗಳಾದ ಸಿರಾಜ್ ಅಹ್ಮದ್, ಖುರ್ಷಿದ್ ಅಹ್ಮದ್, ಮುಸ್ಲಿಮ್ ವೆಲ್‌ಫೇರ್ ಅಸೋ ಸಿಯೇಶನ್ ಅಧ್ಯಕ್ಷ ಗಫೂರ್ ಕಲ್ಯಾಣಪುರ ಉಪಸ್ಥಿತರಿದ್ದರು.