ಆಹಾರ ನಿಯಂತ್ರಣ ವಿಚಾರದಲ್ಲಿ ಗ್ರಾಹಕರ ರಕ್ಷಣೆ ಅತೀ ಅಗತ್ಯ: ಇದಿಯಾ ಕರುಣಾ ಸಾಗರ್
ಉಳ್ಳಾಲ, ಮಾ.12: ಔಷಧೀಯ ವಿಜ್ಞಾನ ಮತ್ತು ಆಹಾರ ನಿಯಂತ್ರಣ ವಿಚಾರದಲ್ಲಿ ಗ್ರಾಹಕರ ರಕ್ಷಣೆ ಅತೀ ಅಗತ್ಯ ಎಂದು ಇದಿಯಾ ಕರುಣಾ ಸಾಗರ್ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾನಿಲಯದ ಪನೀರು ಕ್ಯಾಂಪಸ್‌ನಲ್ಲಿರುವ ನಿಟ್ಟೆ ಗುಲಾಬಿ ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್‌ನ ಫಾರ್ಮಸ್ಯುಟಿಕ್ಸ್ ಎಂಡ್ ಡ್ರಗ್ ರೆಗ್ಯುಲೆಟರಿ ಅಫೈರ್ಸ್ ವಿಭಾಗದ ಆಶ್ರಯದಲ್ಲಿ ‘ಡ್ರಗ್ ರೆಗ್ಯುಲೆಟರಿ ಅಫಾರ್ಸ್ ಆ್ಯನ್ ಇಂಡಸ್ಟ್ರಿಯಲ್ ಪಾರ್ ಸ್ಪೆಕ್ಟಿವ್' ವಿಚಾರದಲ್ಲಿ ಕ್ಷೇಮ ಉಪನ್ಯಾಸ ಸಭಾಂಗಣದಲ್ಲಿ ನಡೆದ ಒಂದು ದಿನದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ವಿಜ್ಞಾನಿಗಳು ಲ್ಯಾಬ್‌ನಲ್ಲಿ ಒಂದು ವಿಷಯದ ಕುರಿತು ಸಂಶೋಧನೆಯಂತಹ ಕಾರ್ಯ ನಡೆಸುತ್ತಾರೆ. ಇಂಡಸ್ಟ್ರಿಯಲ್ಲಿ ವಿಜ್ಞಾನಿಗಳ ಸಂಶೋಧನೆಯನ್ನು ಕಾರ್ಯ ರೂಪಕ್ಕೆ ತರುತ್ತಾರೆ ಇಂತಹ ಸಂದರ್ಭದಲ್ಲಿ ಔಷಧ ವಿಚಾರಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ವ್ಯವಸ್ಥೆಗಳು ಅಗತ್ಯವಾಗಿದೆ ಎಂದರು.
ನಿಟ್ಟೆ ಗುಲಾಬಿ ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸ್ಯಟಿಕಲ್ ಸೈನ್ಸ್‌ನ ಪ್ರಾಂಶುಪಾಲ ಪ್ರೊ ಸಿ.ಎಸ್. ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು.
ಫಾರ್ಮಾ ಲೀಫ್‌ನ ಸಹ ಸಂಸ್ಥಾಪಕಿ ಡಾ ಶೆಹನಾಝ ಖಲೀಲಿ, ನೋವಾರ್ಟಿಸ್ ಹೈದರಾಬಾದ್ ಹಿರಿಯ ವಿಜ್ಞಾನಿ ಡಾ ಸುಬ್ರಮಣ್ಯನ್ ಗಣೇಶನ್, ಬೆಂಗಳೂರು ಐ ಮೆಡ್ ಗ್ಲೋಬಲ್‌ನ ಸಹ ನಿರ್ದೇಶಕ ಶ್ರೀವಾಸ್ತವ ರಾವ್, ಮೈಲಾನ್ ಲ್ಯಾಬೊರೇಟರಿ ಹೈದರಬಾದ್‌ನ ಉಪ ಮಹಾ ಪ್ರಬಂಧಕ ಡಾ ಶ್ರೀಕಾಂತ್ ನಾಡಿಗ್, ಮಣಿಪಾಲ್ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ ಮಂಥನ್ ಡಿ. ಜನೋಡಿಯಾ, ರಿಲಾಯನ್ಸ್ ಲೈಫ್ ಸೈನ್ಸ್ ಮುಂಬೈನ ಕ್ವಾಲಿಟಿ ಉಪ ಮಹಾ ಪ್ರಬಂಧಕ ದೇವರಾಜ್ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು.
ವಿಚಾರ ಸಂಕಿರಣದ ಸಂಯೋಜಕ ಹಾಗೂ ನಿಟ್ಟೆ ಗುಲಾಬಿ ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸ್ಯಟಿಕಲ್ ಸೈನ್ಸ್‌ನ ಉಪ ಪ್ರಾಂಶುಪಾಲ ನಾರಾಯಣಾಚಾರ್ಯುಲು ಸ್ವಾಗತಿಸಿದರು. ಪ್ರಾಧ್ಯಾಪಕರಾದ ಅವರಿಲ್ ಕೆಂಡಿಡಾ ಮಥಾಯಸ್ ಕಾರ್ಯಕ್ರಮ ನಿರ್ವಹಿಸಿದರು. ಡಾ ಮರೀನಾ ಕೊಲೆಂಡಾ ವಂದಿಸಿದರು.