×
Ad

ಯೋಗೇಶ್ ಮಾಸ್ಟರ್ ಮೇಲೆ ಹಲ್ಲೆ: ಮುಸ್ಲಿಮ್ ಲೇಖಕರ ಸಂಘ ಖಂಡನೆ

Update: 2017-03-12 22:53 IST

ಮಂಗಳೂರು, ಮಾ.12: ದಾವಣಗೆರೆಯಲ್ಲಿ ನಡೆದ 'ಲಂಕೇಶ್- 82' ಕಾರ್ಯಕ್ರಮಕ್ಕೆ ಬಂದಿದ್ದ ಸಾಹಿತಿ, ಚಿತ್ರ ನಿರ್ದೇಶಕ ಯೋಗೀಶ್ ಮಾಸ್ಟರ್ ಮೇಲೆ ದುಷ್ಕರ್ಮಿಗಳು ಮಸಿ ಎರಚಿ, ದೈಹಿಕ ಹಲ್ಲೆ ನಡೆಸಿರುವುದನ್ನು ಮುಸ್ಲಿಮ್ ಲೇಖಕರ ಸಂಘ ತೀವ್ರವಾಗಿ ಖಂಡಿಸಿದೆ.

ಈ ಕೃತ್ಯವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ನಡೆದಿರುವ ಹಲ್ಲೆಯಾಗಿದೆ ಹಾಗೂ ಘಟನೆಯು ಸಮಾಜಕ್ಕೆ ಅಪಾಯಕಾರಿ ಸಂದೇಶವನ್ನು ರವಾನೆ ಮಾಡಿದೆ. ಪೊಲೀಸ್ ಇಲಾಖೆಯು ಈ ಕಿಡಿಗೇಡಿ ಕೃತ್ಯವನ್ನೆಸಗಿರುವ ಕೇಸರಿ ಭಯೋತ್ಪಾದಕರನ್ನು ಶೀಘ್ರ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News