ಕಾರ್ಕಳ: ಅಭಯಾರಣ್ಯ ಪುನರ್ವಸತಿ ಯೋಜನೆಯಲ್ಲಿ ಕಮಿಶನ್ ಅವ್ಯವಹಾರ

Update: 2017-03-12 18:44 GMT

ಕಾರ್ಕಳ, ಮಾ.12: ಕುದುರೆಮುಖ ಅಭಯಾರಣ್ಯದಲ್ಲಿ ಒಕ್ಕಲೆದ್ದ ಸಂತ್ರಸ್ತರಿಗೆ ಪುನ ರ್ವಸತಿ ಯೋಜನೆಯಡಿ ಪರಿಹಾರ ಮೊತ್ತ ವಿತರಿಸುವಲ್ಲಿ ನಡೆದಿದೆ ಎನ್ನಲಾದ ಕಮಿಶನ್ ಅವ್ಯವಹಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಅದರನ್ವಯ ಕಾರ್ಕಳ ವನ್ಯಜೀವಿ ವಿಭಾಗದ ಡಿಎ್ ಮರಿಯ ಕ್ರಿಸ್ಟರಾಜ್‌ರ ತಲೆದಂಡವಾಗಿದೆ. ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಈದು ಕನ್ಯಾಲು ಮಹಾಬಲ ಗೌಡ ಎಂಬವರ ಪುತ್ರ ಪ್ರವೀಣ್ ಗೌಡ(23) ಈ ಪ್ರಕರಣವನ್ನು ಬಯಲಿಗೆಳೆದ ಪುನರ್ವಸತಿ ಅರ್ಜಿದಾರ. ಈ ಸಂಬಂಧ ನ್ಯಾಯೋಚಿತ ಬೇಡಿಕೆಯನ್ನು ಮುಂದಿಟ್ಟು ಪ್ರವೀಣ್ ೆ.7ರಂದು ಏಕಾಂಗಿಯಾಗಿ ಕಾರ್ಕಳ ವನ್ಯಜೀವಿ ವಿಭಾಗದ ಡಿಎ್ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿದ್ದರು. ಕಮಿಶನ್ ನೀಡದಿರುವುದೇ ಕಾರಣ: ಮಹಾಬಲ ಗೌಡರ ಕುಟುಂಬಸ್ಥರಿಗೆ ಸೇರಿದ ಜಾಗವು ಆರು ಮಂದಿಗೆ ಪಾಲಾಗಿದ್ದು, ಈ ಪೈಕಿ ನಾಲ್ವರು ತಮ್ಮ ಜಾಗವನ್ನು ಸರಕಾರಕ್ಕೆ ಒಪ್ಪಿಸಲು ಮುಂದಾಗಿದ್ದರು. ಅವರ ಪೈಕಿ ಪ್ರವೀಣ್ ಕೂಡಾ ಒಬ್ಬರು. ಈ ಸಂಬಂಧ ಉಳಿದವರ ಕಡತಗಳು ಈಗಾಗಲೇ ಮಂಜೂರಾತಿಗೊಂಡಿದ್ದರೂ ತನ್ನ ಕಡತವನ್ನು ವಿವಿಧ ನೆಪವೊಡ್ಡಿ ಅಕಾರಿಗಳು ತಡೆಹಿಡಿದಿದ್ದಾರೆ ಎಂಬುದು ಪ್ರವೀಣ್‌ರ ಆರೋಪ.

ಪ್ರವೀಣ್ ಮಧ್ಯವರ್ತಿಗಳ ದಾಳಕ್ಕೆ ಸಿಲುಕದೇ ಪುನರ್ವಸತಿಗಾಗಿ ನೇರವಾಗಿ ಅರ್ಜಿ ಸಲ್ಲಿಸಿದ್ದರು. ಇದೇ ಕಾರಣಕ್ಕೆ ಕಳೆದ ಆರು ತಿಂಗಳಿನಿಂದ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವನ್ಯಜೀವಿ ವಿಭಾಗದ ಅಕಾರಿಗಳು ಸತಾಯಿಸುತ್ತಿದ್ದಾರೆ ಎಂಬುದು ಪ್ರವೀಣ್‌ರ ಅಳಲು. ಈ ಅನ್ಯಾಯದ ವಿರುದ್ಧ ಪ್ರವೀಣ್ ಕಾರ್ಕಳ ವನ್ಯಜೀವಿ ವಿಭಾಗದ ಡಿಎ್ ಕಚೇರಿಯೆದುರು ಧರಣಿ ಕುಳಿತಿದ್ದರು. ಈ ವೇಳೆ ಘಟನಾ ಸ್ಥಳಕ್ಕೆ ಬಂದಿದ್ದ ಠಾಣಾ ವೃತ್ತ ನಿರೀಕ್ಷಕ ಅಂತೋನಿ ಡಿಸೋಜ, ಯಾವುದೇ ರೀತಿಯಲ್ಲಿ ಘೋಷಣೆಗಳನ್ನು ಕೂಗದೆ, ಭಿತ್ತಿಪತ್ರ, ಲಕಗಳನ್ನು ಹಿಡಿಯದೆ ಧರಣಿ ಕುಳಿತಿದ್ದ ತನ್ನನ್ನು ಮಾತನಾಡಿಸಿ, ‘‘ಕಚೇರಿಯ ಹೊರಾಂಗಣದಲ್ಲಿ ಧರಣಿ ಕುಳಿತುಕೊಳ್ಳಲು ಅವಕಾಶ ಇಲ್ಲ. ಕೂಡಲೇ ಇಲ್ಲಿಂದ ಏಳದೇ ಇದ್ದಲ್ಲಿ ಬಂಸಬೇಕಾದೀತು’’ ಎಂದು ಎಚ್ಚರಿಸಿದ್ದರು ಎಂಬುದು ಪ್ರವೀಣ್ ಆರೋಪ.

ಕಾಂಗ್ರೆಸ್ ಕಾರ್ಯಕರ್ತ ಹಾಗೂ ಕನ್ಯಾಲಿನಂತಹ ತೀರಾ ಹಿಂದುಳಿದ ಪ್ರದೇಶದ ಮಲೆಕುಡಿಯ ಸಮುದಾಯದ ಪ್ರವೀಣ್ ಗೌಡ ನಡೆಸುತ್ತಿರುವ ಧರಣಿಯ ವಿಚಾರ ತಿಳಿದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ರಾಜ್ಯ ಅರಣ್ಯ ಸಚಿವರ ಬಳಿ ಮಾತಾಡಿ ಶೀಘ್ರ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳುತ್ತೇನೆ. ಜೊತೆಗೆ ಪುನರ್ವಸತಿ ಯೋಜನೆಯಡಿ ಮಂಜೂರಾದ ಪರಿಹಾರ ಮೊತ್ತದಲ್ಲಿ ಕಮಿಶನ್ ಪಡೆಯುತ್ತಿರುವ ಮಧ್ಯವರ್ತಿಗಳ ಬಗ್ಗೆಯೂ ಸಚಿವರ ಗಮನಕ್ಕೆ ತರುವ ಭರವಸೆ ನೀಡಿ ಧರಣಿ ಹಿಂಪಡೆಯುವಂತೆ ಹೇಳಿದ್ದರು. ಅದರಂತೆ ಪ್ರವೀಣ್ ಗೌಡ ಧರಣಿ ಹಿಂಪಡೆದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರವು ಕಾರ್ಕಳ ವನ್ಯಜೀವಿ ವಿಭಾಗದ ಡಿಎ್ ಮರಿಯ ಕ್ರಿಸ್ಟರಾಜ್‌ರನ್ನು ಕೊಡಗಿನ ವೀರಾಜ ಪೇಟೆಗೆ ವರ್ಗಾವಣೆ ಮಾಡಿ ಅದೇಶ ಹೊರಡಿಸಿದೆ. ಕಾರ್ಕಳಕ್ಕೆ ಗಣೇಶ್ ಭಟ್ ಎಂಬವರನ್ನು ನಿಯೋಜನೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News