ನ್ಯಾಯಾಂಗ ಕ್ಷೇತ್ರದಲ್ಲಿ ವಿಪುಲ ಅವಕಾಶ: ನ್ಯಾ.ಅಬ್ದುಲ್ ನಝೀರ್

Update: 2017-03-12 18:47 GMT

ಮಂಗಳೂರು, ಮಾ.12: ಕಾನೂನು ಕಲಿತರೆ ಉದ್ಯೋಗ ಸಿಗುವುದಿಲ್ಲ ಎಂಬ ಭಾವನೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿರುತ್ತದೆ. ಆದರೆ ಇದು ನಿಜವಲ್ಲ. ನ್ಯಾಯಾಂಗ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಾೀಶ ಎಸ್.ಅಬ್ದುಲ್ ನಝೀರ್ ಹೇಳಿದರು.

ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ರವಿವಾರ ನಡೆದ ‘ರಾಷ್ಟ್ರಮಟ್ಟದ ಕಾನೂನು ಹಬ್ಬ’ದ ಸಮಾರೋಪ ಸಮಾರಂಭ ಹಾಗೂ ಹಳೆ ವಿದ್ಯಾರ್ಥಿಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

1980ರ ದಶಕದಲ್ಲಿ ಕಾನೂನು ಕಲಿತ ಮೇಲೆ ಏನು ಮಾಡುವುದು ಎಂಬ ಪ್ರಶ್ನೆ ನನಗೆ ತಲೆದೋರಿತ್ತು. ಆದರೆ ಎದೆಗುಂದದೆ ನಿರಂತರ ಪರಿಶ್ರಮದಿಂದ ನ್ಯಾಯಾಂಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ತೃಪ್ತಿ ಇದೆ ಎಂದು ನ್ಯಾ.ಅಬ್ದುಲ್ ನಝೀರ್ ನುಡಿದರು.

ವಕೀಲ ವೃತ್ತಿಯ ಸಂದರ್ಭ ಇಂಗ್ಲಿಷ್ ಭಾಷೆಯಲ್ಲಿ ವಾದಿಸು ವುದು ಕಷ್ಟ ಎಂಬ ಭಾವನೆ ಹಲವರಲ್ಲಿದೆ. ಆದರೆ ಕಠಿಣ ಪರಿಶ್ರಮದಿಂದ ಭಾಷೆಯ ಮೇಲೆ ಹಿಡಿತ ಸಾಧ್ಯ. ಈ ನಿಟ್ಟಿನಲ್ಲಿ ವಕೀಲರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ನ್ಯಾ.ಅಬ್ದುಲ್ ನಝೀರ್ ಹೇಳಿದರು.

ರಾಜ್ಯ ಹೈಕೋರ್ಟ್ ನ್ಯಾಯಾೀಶ ಎ.ಎಸ್.ಬೋಪಣ್ಣ ಮಾತನಾಡಿ, ವಕೀಲರು ವೃತ್ತಿಪರತೆಯೊಂದಿಗೆ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕು. ಇದರಿಂದ ಉತ್ತಮ ವಕೀಲರಾಗಿ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಲು ಸಾಧ್ಯ ಎಂದರು.

ಹೈಕೋರ್ಟ್ ನ್ಯಾಯಾೀಶರಾದ ಎ.ಎನ್.ವೇಣುಗೋಪಾಲ ಗೌಡ, ನ್ಯಾ.ಜಾನ್ ಮೈಕಲ್ ಡಿಕುನ್ಹ, ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಧರ್ಮಸ್ಥಳ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ದೇಶದಲ್ಲಿ ಪ್ರಾಚೀನ ಕಾಲದಿಂ ದಲೂ ನ್ಯಾಯ ಪದ್ಧತಿ ಇತ್ತು. ಧರ್ಮಸ್ಥಳದಲ್ಲೂ ಹುಯಿಲು ಮೂಲಕ ನ್ಯಾಯದಾನ ಮಾಡುವ ಕ್ರಮ ಈಗಲೂ ಚಾಲ್ತಿಯ ಲ್ಲಿದೆ. ಇತ್ತೀಚೆಗೆ 94 ವರ್ಷಗಳಿಂದ ಬಗೆಹರಿಯದಿದ್ದ ವಿವಾದ ವೊಂದನ್ನು ಹುಯಿಲು ಮೂಲಕ ಬಗೆಹರಿಸಲಾಗಿದೆ ಎಂದರು.

ಕಾನೂನಿಗೆ ಸಂಬಂಸಿ ಅಧ್ಯಯನಗಳನ್ನು ನಡೆಸುವಾಗ ಈ ದೇಶದ ಪ್ರಾಚೀನ ಕಾನೂನಿನ ಬಗ್ಗೆ ಪರಿಜ್ಞಾನವನ್ನು ಹೊಂದಿದ್ದರೆ ಉತ್ತಮ ಎಂದರು.

ಈ ಸಂದರ್ಭ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸುಪ್ರೀಂ ಕೋರ್ಟ್‌ನ ನೂತನ ನ್ಯಾಯಾೀಶ ಅಬ್ದುಲ್ ನಝೀರ್ ಮತ್ತು ಹೈಕೋರ್ಟ್ ನ್ಯಾಯಾೀಶ ಮೈಕಲ್ ಡಿಕುನ್ಹರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಸಾಯಿನಾಥ್ ಮಲ್ಲಿಗೆಮಾಡು ಮತ್ತು ಡಾ.ಬಾಲಿಕಾ ಸನ್ಮಾನಿತರ ಪರಿಚಯ ಮಾಡಿದರು.

ನಿವೃತ್ತ ಪ್ರಾಂಶುಪಾಲರಾದ ಎನ್.ಟಿ.ಕಡಂಬ, ಪ್ರೊ.ರಾಜೇಂದ್ರ ಶೆಟ್ಟಿ, ಸಂಯೋಜಕ ಸಂತೋಷ್ ಪ್ರಭು, ಕಾರ್ಯದರ್ಶಿ ಗೌತಮಿ ಭಂಡಾರಿ, ಸಹ ಸಂಯೋಜಕರಾದ ವಿಕ್ರಮ್‌ರಾಜ್, ವರ್ಷಾ ಶೆಟ್ಟಿ, ಅತುಲ್ಯಾ, ಸ್ಟೀಾನಿಯಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಸ್ವಾಗತಿಸಿದರು. ಸಿ., ಮಹೇಶ್ಚಂದ್ರ ನಾಯಕ್ ವಂದಿಸಿದರು. ವಿದ್ಯಾರ್ಥಿ ರೂಪೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News