×
Ad

ಬಜ್ಪೆ: ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಶನ್ ವತಿಯಿಂದ ರಕ್ತದಾನ ಶಿಬಿರ

Update: 2017-03-13 10:01 IST

ಬಜ್ಪೆ,ಮಾ.13: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಶನ್ ವತಿಯಿಂದ ರಕ್ತದಾನ ಶಿಬಿರವು ಅನ್ಸಾರ್ ಸ್ಕೂಲ್ ಮತ್ತು ಲೆಡಿಗೋಶನ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಬಜ್ಪೆ ಅನ್ಸಾರ್ ಶಾಲಾ ಸಭಾಂಗಣದಲ್ಲಿ ರವಿವಾರ ನಡೆಯಿತು.

ಡಿವಿಶನ್ ಅಧ್ಯಕ್ಷ ಹಾಫಿಳ್ ಮಜೀದ್ ಫಾಳಿಲ್ ಅಲ್ ಕಾಮಿಲ್ ಅಧ್ಯಕ್ಷತೆ ವಹಿಸಿದ್ದರು. ಅಸ್ರಾರುದ್ದೀನ್ ಅರಬಿಕ್ ಕಾಲೇಜಿನ ಪ್ರಾಂಶುಪಾಲರು ಬದ್ರುದ್ದೀನ್ ಅಝ್‌ಹರಿ ಕೈಕಂಬ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ನೂರಾರು ರಕ್ತದಾನಿಗಳು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಎಸ್‌ವೈಎಸ್ ಬಜ್ಪೆ ಸೆಂಟರ್ ಅಧ್ಯಕ್ಷ ಹಾಜಿ ಹನೀಫ್ ಬಜ್ಪೆ, ಎಸ್‌ವೈಎಸ್ ಜಿಲ್ಲಾ ಮುಖಂಡ ಹಾಜಿ ಸಲೀಲ್ ಬಜ್ಪೆ, ನ್ಯೂ ಸೈಟ್ ಮಸ್ಜಿದುರ್ರಹ್ಮಾನ್ ಅಧ್ಯಕ್ಷ ಸ್ವಾಲಿಹ್ ಕೊಳಂಬೆ,ಗುರುಪುರ ಸರಕಾರಿ ಪದವಿ ಕಾಲೇಜು ಉಪನ್ಯಾಸಕ ಅಹ್ಮದ್ ಹುಸೈನ್ ಶಾಫಿ ಬಜ್ಪೆ, ಎಸ್‌ವೈಎಸ್ ಸೆಂಟರ್ ಮುಖಂಡರುಗಳಾದ ಮುಹಮ್ಮದ್ ಬಶೀರ್ ಬಜ್ಪೆ, ಅಬ್ದುಲ್ ಖಾದಿರ್ ಕಿನ್ನಿಪದವು, ಕೈಕಂಬ ಸುನ್ನೀ ಕೊಆರ್ಡಿನೇಶನ್ ಮುಖಂಡ ಅಹ್ಮದ್ ಕೋಯ ಉಸ್ತಾದ್, ಕೈಕಂಬ ಸೆಕ್ಟರ್ ಅಧ್ಯಕ್ಷ ರಿಯಾಝ್ ಸ‌ಅದಿ ಗುರುಪುರ ಮುಂತಾದವರು ಉಪಸ್ಥಿತರಿದ್ದರು.

ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ, ಕಾಂಗ್ರೆಸ್ ಮುಖಂಡರೂ ಆಗಿರುವ ಶಾಹುಲ್ ಹಮೀದ್ ಬಜ್ಪೆ, ಎಸ್‌ವೈಎಸ್ ಅಮುಂಜೆ ಸೆಂಟರ್ ಮುಖಂಡ ಬಶೀರ್ ಗಾಣೆಮಾರ್, ಮೂಡಬಿದ್ರೆ ಎಸ್‌ವೈಎಸ್ ಮುಖಂಡ ಸಲಾಂ ಮದನಿ ಭೇಟಿ ನೀಡಿದರು. ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಶಾಕಿರ್ ಎಮ್ಮೆಸ್ಸಿ ಸ್ವಾಗತಿಸಿ ಡಿವಿಶನ್ ಪ್ರ.ಕಾರ್ಯದರ್ಶಿ ನೌಫಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News