×
Ad

ಹೈದರಾಬಾದ್:ನಿರ್ಮಾಣ ಸ್ಥಳದಲ್ಲಿ ಮಹಿಳೆಯರಿಬ್ಬರ ಜೀವಂತ ಸಮಾಧಿ

Update: 2017-03-13 16:06 IST

ಹೈದರಾಬಾದ್,ಮಾ.13: ಇಲ್ಲಿಯ ಮಾಧಾಪುರ ಪ್ರದೇಶದಲ್ಲಿಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸೋಮವಾರ ಬೆಳಿಗ್ಗೆ ಬೃಹತ್ ಮಣ್ಣಿನ ರಾಶಿಯಡಿ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ.

ವಾಣಿಜ್ಯ ಸಂಕೀರ್ಣವೊಂದರ ನಿರ್ಮಾಣಕ್ಕಾಗಿ ಪಿಲ್ಲರ್‌ಗಳನ್ನು ಎಬ್ಬಿಸಲು ನಾಲ್ವರು ಕಾರ್ಮಿಕರು 40 ಅಡಿ ಆಳದಲ್ಲಿ ಕಾರ್ಯನಿರತರಾಗಿದ್ದಾಗ ಭಾರೀ ಮಣ್ಣಿನ ರಾಶಿ ಅವರ ಮೇಲೆಯೇ ಕುಸಿದು ಬಿದ್ದಿದೆ. ಎ.ಭಾರತಮ್ಮ(25) ಮತ್ತು ಪಿ.ಕಿಸ್ಟಮ್ಮಾ(45) ಮೃತಪಟ್ಟಿದ್ದು, ಇತರ ಇಬ್ಬರು ಪುರುಷ ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಡಿಸಿಪಿ ವಿಶ್ವಪ್ರಸಾದ್ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಹೈದರಾಬಾದ್ ಮೇಯರ್ ಬಿ.ರಾಮಮೋಹನ್ ಅವರು ಮೃತರ ಕುಟುಂಬಗಳಿಗೆ ತಲಾ ಎಂಟು ಲ.ರೂ.ಪರಿಹಾರವನ್ನು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News