ಭಾರತದ ವ್ಯಕ್ತಿ ಜಿದ್ದಾದಲ್ಲಿ ನಡೆದ ಅಪಘಾತದಲ್ಲಿ ಸಾವು

Update: 2017-03-13 10:54 GMT

ಜಿದ್ದ, ಮಾ.13: ಮಲಪ್ಪುರಂ ವಿ.ಕೆ. ಪಡಿ ಎಂಬಲ್ಲಿನ ನಿವಾಸಿ ಫೈಝಲ್ (28) ಜಿದ್ದ ಅಲ್‌ಖುಂರದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೇಲ್ಸ್‌ಮೆನ್ ಆಗಿ ಅವರು ಕೆಲಸ ಮಾಡುತ್ತಿದ್ದರು. ಫೈಝಲ್‌ರ ವಾಹನ್ ಟ್ರೈಲರ್‌ಗೆ ಢಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿತ್ತು. ಮದುವೆಯಾಗಿ ಎರಡು ತಿಂಗಳ ಹಿಂದೆಯಷ್ಟೆ ಫೈಝಲ್ ಊರಿಂದ ಜಿದ್ದಕ್ಕೆ ಮರಳಿ ಬಂದಿದ್ದರು.

   ಜಿದ್ದದಲ್ಲೇ ಫೈಝಲ್ ರ ತಂದೆ ಅಬ್ದುರ್ರಹ್ಮಾನ್ ದರ್ಜಿಯಾಗಿ ದುಡಿಯುತ್ತಿದ್ದಾರೆ. ಪೈಝಲ್ ಮೃತದೇಹವನ್ನು ಅಗತ್ಯ ಕ್ರಮಗಳನ್ನು ಪೂರ್ತಿಗೊಳಿಸಿ ಊರಿಗೆ ಕಳುಹಿಸಲಾಗುವುದು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News