ಅರುಣ್ ಜೇಟ್ಲಿಗೆ ರಕ್ಷಣಾ ಖಾತೆ

Update: 2017-03-13 12:38 GMT

ಹೊಸದಿಲ್ಲಿ,ಮಾ.13:ಮನೋಹರ ಪಾರಿಕ್ಕರ್ ಅವರು ಗೋವಾದ ನೂತನ ಮುಖ್ಯಮಂತ್ರಿಯಾಗಿ ನಿಯೋಜಿತಗೊಂಡಿರುವ ಹಿನ್ನೆಲೆಯಲ್ಲಿ ವಿತ್ತಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ರಕ್ಷಣಾ ಸಚಿವರಾಗಿ ಹೆಚ್ಚುವರಿ ಅಧಿಕಾರವನ್ನು ವಹಿಸಿಕೊಂಡರು.

2014, ಮೇ ತಿಂಗಳಲ್ಲಿ ಜೇಟ್ಲಿ ವಿತ್ತ ಮತ್ತು ರಕ್ಷಣಾ ಸಚಿವರಾಗಿ ಮೋದಿ ಸರಕಾರದಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು. 2014,ನವೆಂಬರ್‌ನಲ್ಲಿ ಮೋದಿಯವರ ಕರೆಯ ಮೇರೆಗೆ ಆಗ ಗೋವಾದ ಮುಖ್ಯಮಂತ್ರಿಯಾಗಿದ್ದ ಪಾರಿಕ್ಕರ್ ಅವರು ರಕ್ಷಣಾ ಸಚಿವರ ಕಾರ್ಯಭಾರವನ್ನು ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News