ವಧು-ವರರೇ... ನಿಮ್ಮ ಮದುವೆ ಉಡುಪುಗಳನ್ನು ಕಪಾಟಿನಲ್ಲಿಡುವ ಬದಲು ದಾನ ಮಾಡಿ
ಮಂಗಳೂರು, ಮಾ.13: ವಧು-ವರರೇ... ನೀವು ಮದುವೆ ಸಂದರ್ಭ ಬಳಸಿದ ಹೊಸ ಉಡುಪುಗಳನ್ನು ಕಪಾಟಿನಲ್ಲಿ ದಾಸ್ತಾನಿಡಬೇಡಿ. ಅದನ್ನು ಮರು ಬಳಕೆ ಮಾಡಲು ವಾಟ್ಸ್‌ಆ್ಯಪ್ ಮೂಲಕ ಸಂಘಟಿಸಲ್ಪಟ್ಟ ಮಂಗಳೂರಿನ 'ಝವಾಜ್ ಚಾರಿಟೇಬಲ್ ಟ್ರಸ್ಟ್'ನ ಸಾಮಾಜಿಕ ಕಳಕಳಿಯ ಯುವಕರ ತಂಡವೊಂದು ಸಿದ್ಧಗೊಂಡಿದೆ. ಅಷ್ಟೇ ಅಲ್ಲ, ಈ ಟ್ರಸ್ಟ್ ಕರ್ನಾಟಕದಾದ್ಯಂತ ಉಡುಪುಗಳ ಸಂಗ್ರಹ ಮತ್ತು ವಿತರಣಾ ಅಭಿಯಾನಕ್ಕೆ ಮುಂದಾಗಿದೆ.
ಮದುವೆ ಸಂದರ್ಭ ವಧು-ವರರು ಬೆಲೆಬಾಳುವ ಬಟ್ಟೆಬರೆಗಳನ್ನು ಒಂದೆರಡು ಬಾರಿ ಧರಿಸಿ ಮತ್ತೆ ಕಪಾಟಿನಲ್ಲೋ, ಪೆಟ್ಟಿಗೆಯಲ್ಲೋ ಸಂಗ್ರಹಿಸಿಟ್ಟಿರುತ್ತಾರೆ. ಕೆಲವರು ಅದನ್ನು ಬಳಸದೆ ವರ್ಷಗಟ್ಟಲೆ ದಾಸ್ತಾನಿಡುತ್ತಾರೆ. ಹೆಚ್ಚಿನ ವಧು-ವರರು ಅದನ್ನು ಬಳಕೆಯಾಗುವುದು ಅಪರೂಪ. ಇದು ಮರುಬಳಕೆಯಾಗಬೇಕು ಮತ್ತು ಮದುವೆ ಸಂದರ್ಭ ಹೊಸ ಬಟ್ಟೆಬರೆ ಖರೀದಿಸಲಾಗದೆ ಇರುವ ಅರ್ಹ ಬಡ ಕುಟುಂಬಕ್ಕೆ ಇದನ್ನು ತಲುಪಿಸಬೇಕು ಎಂಬ ಕನಸು ಹೊತ್ತವರು ಸುರತ್ಕಲ್ ಸಮೀಪದ ಕಾನ ನಿವಾಸಿ ಇಸ್ಮಾಯೀಲ್ ಎಂಬ ಯುವ ಸಾಮಾಜಿಕ ಕಾರ್ಯಕರ್ತ.
ತನ್ನ ಈ ಕನಸನ್ನು ಸಾಕಾರಗೊಳಿಸಲು ಅವರು ವಾಟ್ಸ್‌ಆ್ಯಪ್ ಮೂಲಕ ಗೆಳೆಯರ ಸಹಕಾರ ಕೋರಿದರು. ಅದರಂತೆ 8 ಮಂದಿ ಸ್ನೇಹಿತರು ಪರಸ್ಪರ ಚರ್ಚೆ ನಡೆಸಿ ಫೆ.28ರಂದು ಸುರತ್ಕಲ್‌ನಲ್ಲಿ ಸಭೆ ಸೇರಿ 'ಝವಾಜ್ ಚಾರಿಟೇಬಲ್ ಟ್ರಸ್ಟ್' ಸ್ಥಾಪಿಸಲು ನಿರ್ಧರಿಸಿದರು. ಅಷ್ಟೇ ಅಲ್ಲ, ವಾಟ್ಸ್‌ಆ್ಯಪ್ ಮೂಲಕ ತಮ್ಮ ಈ ಚಿಂತನೆ ಮತ್ತು ಯೋಜನೆಯನ್ನು ಹರಿಯಬಿಟ್ಟು ವಧುವರರು ಒಂದೆರಡು ಬಾರಿ ಧರಿಸಿ ಬಿಟ್ಟ ಬಟ್ಟೆಬರೆಗಳನ್ನು ಸಂಗ್ರಹಿಸತೊಡಗಿದರು. ಈಗಾಗಲೇ ನಲವತ್ತಕ್ಕೂ ಹೆಚ್ಚು ಉಡುಪುಗಳನ್ನು ಸಂಗ್ರಹಿಸಿರುವ ಈ ತಂಡ ಅರ್ಹರಿಗೆ ತಲುಪಿಸಿದೆ.
ಉಡುಪುಗಳನ್ನು ಸಂಗ್ರಹಿಸಲು ಮಂಗಳೂರು ಹಾಗೂ ಉಡುಪಿಯ ಪ್ರಮುಖ ಮಸೀದಿಗಳ ಆವರಣ, ಫಿಝಾಮಾಲ್, ಸಿಟಿ ಸೆಂಟರ್, ತೊಕ್ಕೊಟ್ಟು, ಮೂಡುಬಿದಿರೆ, ಸುರತ್ಕಲ್ ಮತ್ತಿತರ ಜಂಕ್ಷನ್‌ನಲ್ಲಿ 'ಕ್ಲೋತ್‌ಬಾಕ್ಸ್'ಗಳನ್ನು ಇಡಲಾಗುತ್ತದೆ. ದಾನಿಗಳು ತಮ್ಮ ಉಡುಪುಗಳನ್ನು ಈ ಬಾಕ್ಸ್‌ಗೆ ಹಾಕಬಹುದು. ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಇದನ್ನು ಸಕಾಲಕ್ಕೆ ಸಂಗ್ರಹಿಸಿ ಅರ್ಹರಿಗೆ ತಲುಪಿಸಲಾಗುತ್ತದೆ. ಕೇವಲ ಮದುವೆಯ ಬಟ್ಟೆಬರೆಗಳು ಮಾತ್ರವಲ್ಲ ಇತರ ಬಟ್ಟೆಬರೆಗಳನ್ನು ಕೂಡ ಸಂಗ್ರಹಿಸಲಾಗುತ್ತದೆ. ಮುಂದಿನ ರಮಝಾನ್ ಸಂದರ್ಭ ಅದನ್ನು ಅರ್ಹರಿಗೆ ತಲುಪಿಸುವ ಗುರಿಯನ್ನೂ ಟ್ರಸ್ಟ್ ಹೊಂದಿದೆ.
ಉಡುಪುಗಳನ್ನು ದಾನಮಾಡಲು ಇಚ್ಛಿಸುವವರು ಮತ್ತು ಉಡುಪುಗಳು ಬೇಕಾದವರು ಟ್ರಸ್ಟ್‌ನ ಸದಸ್ಯರಾದ ಮೊಯಿನುದ್ದೀನ್ ಪುತ್ತೂರು (ಮೊ. 9686584868) ಮತ್ತು ಅಝ್ಮಲ್ ಸುರತ್ಕಲ್ (ಮೊ.9164435578)ಅವರನ್ನು ಸಂಪರ್ಕಿಸಬಹುದು.
ಉಡುಪು ಸಂಗ್ರಹ ಅಭಿಯಾನಕ್ಕೆ ಚಾಲನೆ:
'ಝವಾಜ್ ಚಾರಿಟೇಬಲ್ ಟ್ರಸ್ಟ್'ನ ಉದ್ಘಾಟನೆ ಮತ್ತು 'ಕ್ಲೋತ್ ಬಾಕ್ಸ್' ಇಟ್ಟು ಉಡುಪು ಸಂಗ್ರಹ ಅಭಿಯಾನಕ್ಕೆ ಸೋಮವಾರ ಬೆಳಗ್ಗೆ ನಗರದ ಬಂದರ್ ಕಚ್ಚಿ ಮೆಮನ್ ಮಸೀದಿಯಲ್ಲಿ ಚಾಲನೆ ನೀಡಲಾಯಿತು.
'ನಂಡೊ ಪೆಂಙಲ್' ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಚ್ಚಿ ಮೆಮನ್ ಮಸೀದಿಯ ಇಮಾಮ್ ಮುಹಮ್ಮದ್ ಅಲಿ ದುಆ ನೆರವೇರಿಸಿದರು. ಮಸೀದಿಯ ಕೋಶಾಧಿಕಾರಿ ರಶೀದುಲ್ಲಾ, ಬಾಂಬೆ ಹೊಟೇಲ್ ಮಾಲಕ ಸುಲೈಮಾನ್ ಹಾಜಿ, ಟ್ರಸ್ಟ್‌ನ ಕೋಶಾಧಿಕಾರಿ ಅಫ್ತಾಬ್ ಬಂದರ್, ಸದಸ್ಯರಾದ ಇರ್ಫಾನ್ ಮೂಡುಬಿದಿರೆ, ಅಝ್ಮಲ್ ಸುರತ್ಕಲ್, ಮೊಯಿನುದ್ದೀನ್ ಪುತ್ತೂರು, ಇಸ್ಮಾಯೀಲ್ ನಾವುಂದ ಕುಂದಾಪುರ ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಇಸ್ಮಾಯೀಲ್ ಕಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಝೀಮ್ ಅಹ್ಮದ್ ಕಿರಾಅತ್ ಪಠಿಸಿದರು. ಟ್ರಸ್ಟ್ ಕಾರ್ಯದರ್ಶಿ ನೌಫಲ್ ಸಾಝ್ ಮದಕ ಸ್ವಾಗತಿಸಿದರು. ಸಂಚಾಲಕ ಸಮೀರುದ್ದೀನ್ ಪಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಸಮಾಜದಲ್ಲಿ ಸಾವಿರಾರು ಮಂದಿ ಮದುವೆ ಸಂದರ್ಭ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಕಿಂಚಿತ್ತಾದರೂ ಸೇವೆ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಟ್ರಸ್ಟ್ ಸ್ಥಾಪಿಸಿದ್ದೇವೆ. ಈಗಾಗಲೆ 39 ಮಂದಿ ವಧುಗಳಿಗೆ ತಲಾ 2ರಂತೆ 78 ಸೀರೆಗಳು ಮತ್ತು ಒಬ್ಬ ವರನಿಗೆ 1 ಕೋಟ್ ನೀಡಲಾಗಿದೆ. ಇನ್ನೂ ಹೆಚ್ಚು ಉಡುಪುಗಳ ಆವಶ್ಯಕತೆ ಇದ್ದು, ಅದಕ್ಕಾಗಿ ಸಾಮಾಜಿಕ ತಾಣದ ಮೂಲಕ ಮತ್ತು ಮಸೀದಿ-ಮಾಲ್ ಮತ್ತಿತರ ಜಂಕ್ಷನ್‌ನಲ್ಲಿ ಱಕ್ಲೋತ್ ಬಾಕ್ಸೃ್ೞಗಳನ್ನಿಟ್ಟು ದಾನಿಗಳಿಂದ ಉಡುಪುಗಳನ್ನು ಸಂಗ್ರಹಿಸಿ ಅದನ್ನು ಆವಶ್ಯವಿರುವ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಱಝವಾಜ್ ಚಾರಿಟೇಬಲ್ ಟ್ರಸ್ಟ್‌ೞಪ್ರಾರಂಭಿಸಿದ್ದೇವೆ
- ಇಸ್ಮಾಯೀಲ್ ಕಾನ , ಟ್ರಸ್ಟ್‌ನ ಅಧ್ಯಕ್ಷ
ಕೇವಲ ವಧು-ವರರ ಉಡುಪುಗಳು ಮಾತ್ರವಲ್ಲ ಇನ್ನಿತರ ದೈನಂದಿನ ಉಡುಪುಗಳನ್ನು ದಾನಿಗಳಿಂದ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಅದನ್ನು ಯಾರಿಗೆ ಆವಶ್ಯಕತೆಯೋ ಇದೆಯೋ ಅವರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದ್ದೇವೆ. ನಮ್ಮ ಈ ಯೋಜನೆಗೆ ಎಲ್ಲರೂ ಕೈ ಜೋಡಿಸಬೇಕು.- ಸಮೀರುದ್ದೀನ್ ಪಡುಬೆಟ್ಟು, ಸಂಚಾಲಕ.