ಪನ್ನೀರ್‌ಸೆಲ್ವಂ ಬಣಕ್ಕೆ ನಿಷ್ಠೆ ಬದಲಿಸಿದ ಎಐಎಡಿಎಂಕೆ ಶಾಸಕ ಅರುಣ್‌ಕುಮಾರ್

Update: 2017-03-13 13:02 GMT

ಚೆನ್ನೈ, ಮಾ.13: ಎಐಎಡಿಎಂಕೆ ಶಾಸಕ ಪಿಆರ್‌ಜಿ ಅರುಣ್‌ಕುಮಾರ್ ಅವರಿಂದು ಭಿನ್ನಮತೀಯರ ಮುಖಂಡ ಒ.ಪನ್ನೀರ್‌ಸೆಲ್ವಂರನ್ನು ಭೇಟಿ ಮಾಡಿ ಬೆಂಬಲ ಸೂಚಿಸುವುದರೊಂದಿಗೆ ಪನ್ನೀರ್‌ಸೆಲ್ವಂ ಬಣದ ಬಲ 12ಕ್ಕೇರಿದೆ.

ಎಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಕಳೆದ ತಿಂಗಳು ತಮ್ಮ ಬೆಂಬಲಿಗ ಶಾಸಕರನ್ನು ಕೂವತ್ತೂರಿನ ರೆಸಾರ್ಟ್‌ನಲ್ಲಿ ಇರಿಸಿದ್ದಾಗ ಅಲ್ಲಿಂದ ‘ತಪ್ಪಿಸಿಕೊಂಡು’ ಬಂದಿದ್ದ ಅರುಣ್‌ಕುಮಾರ್, ತನ್ನ ಊರಾದ ಕೊಯಂಬತ್ತೂರಿಗೆ ತೆರಳಿದ್ದರು. ಫೆ.18ರಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಯಾಚನೆ ಸಂದರ್ಭದಲ್ಲೂ ಅವರು ಪಾಲ್ಗೊಂಡಿರಲಿಲ್ಲ.

 ಎಐಎಡಿಂಕೆ ಪಕ್ಷದ ಆಡಳಿತವು ಒಂದು ಕುಟುಂಬದ(ಶಶಿಕಲಾ ಕುಟುಂಬ) ಕೈಯಲ್ಲಿ ಕೇಂದ್ರೀಕೃತವಾಗುವುದನ್ನು ನಾನು ಒಪ್ಪಲಾರೆ ಎಂದು ಅರುಣ್‌ಕುಮಾರ್ ತಿಳಿಸಿದ್ದಾರೆ. ಈ ಮಧ್ಯೆ, ಅರುಣ್‌ಕುಮಾರ್ ತನ್ನ ಮಾತೃಪಕ್ಷಕ್ಕೆ ಮರಳಿ ಬರಲಿದ್ದಾರೆ ಎಂದು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News