×
Ad

ಮಂಗಳೂರು: ಮೇಯರ್ ಹಾಗೂ ಉಪಮೇಯರ್‌ಗೆ ಸನ್ಮಾನ

Update: 2017-03-13 21:44 IST

ಮಂಗಳೂರು, ಮಾ.13: ನಗರದ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು.ಜನರ ಬೇಡಿಕೆಗಳ ಅನುಗುಣವಾಗಿ ಆದ್ಯತೆಯ ಮೇರೆಗೆ ಕೆಲಸ ನಿರ್ವಹಿಸಲಾಗುವುದು. ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ಇರುವುದರಿಂದ ಅದನ್ನು ಎದುರಿಸಲು ನಾವೆಲ್ಲರೂ ಸಜ್ಜಾಗಬೇಕು. ಪಕ್ಷದ ಹಿರಿಯರ ಸಲಹೆ ಪಡೆದು ಪಕ್ಷದ ವರ್ಚಸ್ಸಿಗೆ ಧಕ್ಕೆ ಬರದಂತೆ ಎಚ್ಚರ ವಹಿಸಿ ಕಾರ್ಯವನ್ನು ನಿರ್ವಹಿಸುವೆ ಎಂದು ಮನಪಾ ನೂತನ ಮೇಯರ್ ಕವಿತಾ ಸನಿಲ್ ಹೇಳಿದರು.

ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಈ ಸಂದಭರ್ ನೂತನವಾಗಿ ಆಯ್ಕೆಯಾದ ಉಪಮೇಯರ್ ರಜನೀಶ್‌ರನ್ನೂ ಸನ್ಮಾನಿಸಲಾಯಿತು.

 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಸದಸ್ಯ ಪಿ.ವಿ. ಮೋಹನ್, ಮಾಜಿ ಉಪಮೇಯರ್ ಅಬ್ದುಲ್ ಸಲೀಮ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮೀನ್, ಕಾರ್ಪೊರೇಟರ್‌ಗಳಾದ ಜೆಸಿಂತಾ ಆಲ್ಮೇಡ, ಪ್ರಕಾಶ್ ಅಳಪೆ, ರತಿಕಲಾ, ಶೈಲಜ, ಕವಿತಾ ವಾಸು, ಆಶಾ ಡಿಸಿಲ್ವಾ, ಪಕ್ಷದ ಪ್ರಮುಖರಾದ ನಮಿತಾ ರಾವ್, ಎಂ. ಫಾರೂಕ್, ಶೇಖರ ಸುವರ್ಣ, ಸುರೇಶ್ ಶೆಟ್ಟಿ, ದುರ್ಗಾಪ್ರಸಾದ್, ಪ್ರಭಾಕರ ಶ್ರೀಯಾನ್, ಶಾಫಿ ಅಹ್ಮದ್, ಲಕ್ಷ್ಮೀ ನಾಯರ್, ಅಹ್ಮದ್ ಬಾವಾ, ಉಮೇಶ್ ದೇವಾಡಿಗ, ಜಯಲಕ್ಷ್ಮೀ, ಸುಜಾತಾ ಅಹಲ್ಯ, ಪ್ರತಿಭಾ ಪೂಜಾರಿ, ಜಯಶೀಲಾ ಅಡ್ಯಂತಾಯ, ಸೇಸಮ್ಮ, ಬೆನೆಟ್ ಡಿಮೆಲ್ಲೊ, ಹುಸೈನ್ ಬೋಳಾರ, ಸುಧಾಕರ, ಆಸೀಫ್ ಅಹ್ಮದ್, ರಂಜನ್ ಕುಮಾರ್, ಮೋಹನ್ ಕೊಟ್ಟಾರಿ, ಶಶಿಕಲಾ ಕದ್ರಿ, ಭರತ್ ರಾಮ್, ಜಯಂತ ಪೂಜಾರಿ, ದಿನೇಶ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News