×
Ad

'ಗ್ರೀನ್ ಬ್ಯಾಂಕಿಂಗ್ ಗ್ರಹಿಕೆ ಮತ್ತು ಸವಾಲುಗಳು' ಕುರಿತು ವಿಚಾರ ಸಂಕಿರಣ

Update: 2017-03-13 21:49 IST

ಮಂಗಳೂರು, ಮಾ.13: ಮಂಗಳೂರು ವಿವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಱಗ್ರೀನ್ ಬ್ಯಾಂಕಿಂಗ್ ಗ್ರಹಿಕೆ ಮತ್ತು ಸವಾಲುಗಳುೞ ಎಂಬ ವಿಷಯದ ಬಗ್ಗೆ ನಗರದ ಎನ್‌ಜಿಒ ಹಾಲ್‌ನಲ್ಲಿ ವಿಚಾರ ಸಂಕಿರಣ ನಡೆಯಿತು.

 ಕಾರ್ಯಕ್ರಮವನ್ನು ಸ್ಟೇಟ್‌ಬ್ಯಾಂಕ್ ಆಫ್ ಮೈಸೂರ್‌ನ ಡಿಜಿಎಂ ಗಿರಿಧರ್ ಉದ್ಘಾಟಿಸಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಕೆ. ಭೈರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿವಿ ಪ್ರೊ. ಜಿಮ್ ಹಾಗನ್ ಅತಿಥಿಗಳಾಗಿದ್ದರು. ಡಾ. ಮೀರಾ ಲಿಟಿಫಿಯಾ ಅರನ್ಹಾ ದಿಕ್ಸೂಚಿ ಭಾಷಣ ಮಾಡಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಸಿ.ಕೆ. ಹೆಬ್ಬಾರ್ ಸಮ್ಮೇಳನದ ಕುರಿತು ಪಕ್ಷಿನೋಟ ನೀಡಿದರು.

89 ಸಂಶೋಧನಾ ಲೇಖನಗಳ ಕೃತಿಯನ್ನು ಕುಲಪತಿ ಪ್ರೊ. ಕೆ. ಭೈರಪ್ಪಬಿಡುಗಡೆಗೊಳಿಸಿದರು. ಡಾ. ಯತೀಶ್ ಕುಮಾರ್ ವಂದಿಸಿದರು. ಡಾ.ವೊಲ್ಲಿ ಸಂಜಯ್ ಚೌಧರಿ ಕಾರ್ಯಕ್ರಮ ನಿರೂಪಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಸಿಂಡಿಕೇಟ್ ಬ್ಯಾಂಕ್‌ನ ಸುಜೀರ್ ಪ್ರಭಾಕರ್, ಚಾರ್ಟಡ್ ಅಕೌಂಟೆಂಟ್ ಎಸ್.ಎಸ್. ನಾಯಕ್, ಎಸ್‌ಬಿಐನ ಉದಯ ಕುಮಾರ್, ಎಸ್‌ಬಿಎಂನ ಸುಧಾಕರ್ ನಾಯುಕ್, ಮಣಿಪಾಲದ ಗುರುಪ್ರಸಾದ್ ರಾವ್ ಮತ್ತು ವಿಕ್ರಂ ಬಾಳಿಗಾ ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯೆನೆಪೊಯ ನಿವೃತ್ತ ಕುಲಸಚಿವ ಡಾ. ಕುಮಾರ್ ಮೆನನ್, ಎ.ಕೆ. ವಿನೋದ್ ಅತಿಥಿಗಳಾಗಿದ್ದರು. ಸಮ್ಮೇಳನದ ಸಂಚಾಲಕ ಡಾ.ಎ.ಸಿದ್ದೀಕ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News