ಒಬಾಮರಿಂದ ಟ್ರಂಪ್ ಫೋನ್ ಕದ್ದಾಲಿಕೆ :ಆರೋಪ

Update: 2017-03-13 17:05 GMT

ವಾಶಿಂಗ್ಟನ್, ಮಾ. 13: ಕಳೆದ ವರ್ಷದ ಚುನಾವಣಾ ಪ್ರಚಾರದ ವೇಳೆ, ಟ್ರಂಪ್ ಟವರ್‌ನಲ್ಲಿನ ಫೋನ್‌ಗಳನ್ನು ಕದ್ದಾಲಿಸಲಾಗಿತ್ತು ಎಂಬ ತನ್ನ ಆರೋಪಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುರಾವೆ ಒದಗಿಸಬೇಕು, ಇಲ್ಲವೇ ಆರೋಪಗಳನ್ನು ಹಿಂದಕ್ಕೆ ಪಡೆಯಬೇಕು ಎಂಬುದಾಗಿ ಪ್ರಭಾವಶಾಲಿ ರಿಪಬ್ಲಿಕನ್ ಸೆನೆಟರ್ ಜಾನ್ ಮೆಕೇನ್ ರವಿವಾರ ಹೇಳಿದ್ದಾರೆ.

ಸದನ ಗುಪ್ತಚರ ಸಮಿತಿಯೂ ಈ ಬಗ್ಗೆ ಪುರಾವೆಗಳನ್ನು ನೀಡುವಂತೆ ಟ್ರಂಪ್ ಆಡಳಿತವನ್ನು ಒತ್ತಾಯಿಸುತ್ತಿದೆ.

‘‘ಅಧ್ಯಕ್ಷರು ಎರಡು ಆಯ್ಕೆಗಳನ್ನು ಹೊಂದಿದ್ದಾರೆ ಎಂದು ನನಗನಿಸುತ್ತದೆ: ಒಂದೋ ಅವರು ತನ್ನ ಆರೋಪಗಳನ್ನು ಹಿಂದಕ್ಕೆ ಪಡೆಯಬೇಕು, ಇಲ್ಲವೇ ಸೂಕ್ತ ಪುರಾವೆಯನ್ನು ಒದಗಿಸಬೇಕು. ಯಾಕೆಂದರೆ ಈ ಮಾಹಿತಿ ಅಮೆರಿಕದ ಜನರಿಗೆ ತಿಳಿಯಬೇಕಾಗಿದೆ. ಯಾಕೆಂದರೆ, ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಕಾನೂನು ಉಲ್ಲಂಘಿಸಿದ್ದರೆ, ಅದು ಗಂಭೀರ ವಿಷಯವಾಗಿದೆ’’ ಎಂದು ಸೆನೆಟರ್ ಮೆಕೇನ್ ಹೇಳಿದರು.

ಕಳೆದ ವಾರ ಟ್ವೀಟ್ ಮಾಡಿದ್ದ ಟ್ರಂಪ್, ‘‘ಭಯಾನಕ! ಜಯಕ್ಕಿಂತ ಸ್ವಲ್ಪವೇ ಹೊತ್ತಿನ ಮೊದಲು ಟ್ರಂಪ್ ಟವರ್‌ನಲ್ಲಿನ ನನ್ನ ಫೋನ್‌ಗಳನ್ನು ಒಬಾಮ ಕದ್ದಾಲಿಸಿದ್ದಾರೆ ಎನ್ನುವುದು ಈಗಷ್ಟೇ ಗೊತ್ತಾಯಿತು. ಆದರೆ, ಅವರಿಗೆ ಏನೂ ಸಿಗಲಿಲ್ಲ’’ ಎಂದು ಹೇಳಿದ್ದರು.

ಇತರ ಹಲವು ಟ್ವೀಟ್‌ಗಳಲ್ಲಿ ಇದೇ ಆರೋಪಗಳನ್ನು ಮಾಡಿದ್ದಾರಾದರೂ, ಯಾವುದೇ ಪುರಾವೆ ಒದಗಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News