ಉಡುಪಿ: ಉಚಿತ ಗ್ಲಾಕೋಮಾ ತಪಾಸಣಾ ಶಿಬಿರ
ಉಡುಪಿ, ಮಾ.13: ಮಂಗಳೂರು ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ದ ವತಿಯಿಂದ ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ಆಸ್ಪತ್ರೆಯಲ್ಲಿ ಆಯೋಜಿಸಲಾದ ಉಚಿತ ಗ್ಲಾಕೋಮಾ ತಪಾಸಣಾ ಶಿಬಿರವನ್ನು ಗ್ಲಾಕೋಮಾ ತಜ್ಞ ಡಾ.ವಿಕ್ರಮ್ ಜೈನ್ ರವಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೇತ್ರ ತಜ್ಞ ಡಾ.ಪ್ರಮೋದ್ ಶೆಟ್ಟಿ, ಮೆನೇಜರ್ ಅಬ್ದುಲ್ ಖಾದರ್, ನೇತ್ರ ಸಹಾಯಕ ಅಧಿಕಾರಿ ಸ್ವಾತಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಸಯ್ಯದ್ ಮೊದಲಾದವರ ಉಪಸ್ಥಿತರಿದ್ದರು. ಸುಮಾರು 100 ಮಂದಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.
ಸುಳ್ಯ:
ಳ್ಯದ ಪ್ರಸಾದ್ ನೇತ್ರಾಲಯದಲ್ಲಿ ಹಮ್ಮಿಕೊಳ್ಳಲಾದ ಶಿಬಿರವನ್ನು ಗ್ಲಾಕೋಮಾ ತಜ್ಞೆ ಡಾ.ಕೃಪಾಲಿನಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೇತ್ರಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ಉಚಿತ ತಪಾ ಸಣೆ ಹಾಗೂ ಚಿಕಿತ್ಸೆಯನ್ನು ನೀಡಲಾಯಿತು.
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಾದ್ ನೇತ್ರಾಲಯದಲ್ಲಿ ನಡೆದ ಗ್ಲಾಕೋಮಾ ತಪಾಸಣಾ ಶಿಬಿರವನ್ನು ಗ್ಲಾಕೋಮಾ ತಜ್ಞ ಡಾ.ಶಶಿಧರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು. ಶಿಬಿರದಲ್ಲಿ ನೂರಕ್ಕೂ ಅಧಿಕ ಮಂದಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.