ಮಂಗಳೂರು: ಜೈಲ್‌ನಿಂದ ತಪ್ಪಿಸಿಕೊಂಡಿದ್ದ ಖೈದಿ ಸೆರೆ
Update: 2017-03-14 15:12 IST
ಮಂಗಳೂರು, ಮಾ.14: ಮಾ.10 ರಂದು ಮಂಗಳೂರಿನ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಖೈದಿಯನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡ ಘಟನೆ ಇಂದು ನಡೆದಿದೆ.
ಜಿನ್ನಪ್ಪ ಪರವ ಎಂಬಾತ ಮಾ.10ರಂದು ಸುಮಾರು ಬೆಳಗಿನ ಜಾವ 3:30 ಗಂಟೆಗೆ ಮಂಗಳೂರು ಕಾರಾಗೃಹದಿಂದ ಪರಾರಿಯಾಗಿದ್ದನು.
ಸುಳ್ಯ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಎಂಬಲ್ಲಿ ಇರುವನೆಂಬ ಮಾಹಿತಿಯಂತೆ ಬುಧಬಾರ ದಿನ ಪೊಲೀಸ್ ವೃತ್ತ ನಿರೀಕ್ಷಕರಾದ ಸತೀಶ್ ರವರ ಮಾರ್ಗದರ್ಶನದಲ್ಲಿ, ಸುಳ್ಯ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ ಎಚ್.ವಿ. ಹಾಗೂ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಕೃಷ್ಣಯ್ಯ ಕೆ, ಸಿಬ್ಬಂದಿ ಸುಚಿನ್, ಫುನಿತ್ ಕುಮಾರ್, ಅಶೋಕ್ ಕುಮಾರ್ ರವರೊಂದಿಗೆ ವಶಕ್ಕೆ ಪಡೆದುಕೊಂಡಿದ್ದು ಸುಳ್ಯ ಠಾಣೆಗೆ ಕರೆದೊಯ್ಯಲಾಗಿದೆ.