ದುಬೈ: KSCC ವತಿಯಿಂದ ಬೃಹತ್ ರಕ್ತದಾನ ಶಿಬಿರ
ದುಬೈ, ಮಾ.14: ಕರ್ನಾಟಕ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (KSCC) ಇದರ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ದುಬೈ ಸರಕಾರದ ಹೆಲ್ತ್ ಅಥೋರಿಟಿ ಮತ್ತು ಕಮ್ಯುನಿಟಿ ಡೆವಲಪ್‌ಮೆಂಟ್ ಅಥೋರಿಟಿ ಇದರ ಸಹಯೋಗದೊಂದಿಗೆ ಮಾರ್ಚ್ 10ರಂದು, ದೇರಾ ದುಬೈಯ ಯೂನಿಯನ್ ಮೆಟ್ರೋ ಸ್ಟೇಷನ್ ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದುಬೈಯ ಉದ್ಯಮಿ ಅಬ್ದುಲ್ ರಝಾಕ್ ರಕ್ತದಾನಿಗಳಿಗೆ ಉಡುಗೊರೆಯನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಕ್ತದಾನದ ಮಹತ್ವವನ್ನು ವಿವರಿಸಿ ರಕ್ತದಾನವು ಹೇಗೆ ಒಂದು ಜೀವವನ್ನು ರಕ್ಷಿಸುತ್ತದೆ ಎಂಬ ಬಗ್ಗೆ ತಿಳಿಸಿದರು ಹಾಗೂ ಕಾರ್ಯಕ್ರಮದ ಸಂಘಟಕರನ್ನು ಶ್ಲಾಘಿಸಿದರು.
KSCC ಇದರ ಉಪಾಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ರವರು 'ಕರ್ನಾಟಕ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್' ಇದರ ಕಾರ್ಯ ವೈಖರಿ ಮತ್ತು ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅವರು ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಅನಿವಾಸಿ ಭಾರತೀಯರನ್ನು ಅಬಿವೃದ್ಧಿ ಪಡಿಸುವ ಕ್ಲಬ್ ನ ಉದ್ದೇಶಗಳ ಬಗ್ಗೆ ವಿವರಿಸಿದರು.
KSCCಗೆ ನಿರಂತರವಾಗಿ ಸಹಕರಿಸುತ್ತಿರುವ ಕಮ್ಯುನಿಟಿ ಡೆವಲಪ್‌ಮೆಂಟ್ ಅಥೋರಿಟಿಗೆ ಅಭಿನಂದನೆಗಳನ್ನು ಸಲ್ಲಿಸಿದ ಅವರು ಇದು KSCC ವತಿಯಿಂದ ನಡೆಯುವ ಎರಡನೆಯ ರಕ್ತದಾನ ಶಿಬಿರವಾಗಿದೆ. ಕ್ಲಬ್ ನ ವತಿಯಿಂದ ಇತ್ತೀಚೆಗೆ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕಾರ್ಮಿಕ ದಿನಾಚರಣೆ ಮುಂತಾದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು ಮತ್ತು ಇಂದಿನ ಕಾಲಘಟ್ಟದಲ್ಲಿ ರಕ್ತದಾನದ ಪ್ರಯೋಜನಗಳು ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು.
ಕಮ್ಯುನಿಟಿ ಡೆವಲಪ್‌ಮೆಂಟ್ ಅಥೋರಿಟಿ (CDA) ಮತ್ತು ದುಬೈ ಸರಕಾರವು KSCCಯ ಸಮಾಜ ಸೇವೆಗಳನ್ನು ಪರಿಗಣಿಸಿ ಶ್ಲಾಘನೆಯ ಪ್ರಮಾಣ ಪತ್ರ ನೀಡಿ ಅಭಿನಂದಿಸಿತು.
KSCC ವ್ಯವಸ್ಥಾಪಕ ಮುಹಮ್ಮದ್ ಶಾಫಿ, ಹೆಲ್ತ್ ಫರ್ಸ್ಟ್ ಫಾರ್ಮಸಿಯ ಪ್ರಾಯೋಜಕ ಪ್ರತಿನಿಧಿ, ಅಬ್ದುಲ್ ರಶೀದ್, ಡೆಕೋ ಸ್ಪೇಸ್ ಇಂಟೀರಿಯರ್ಸ್ ಇದರ ಪಾಲುದಾರ ಅಬ್ದುಲ್ ಹಮೀದ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಪಾಳ್ಗೊಂಡವರು ರಕ್ತದಾನ ಮಾಡಿದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಲಘು ಉಪಹಾರ, ಉಡುಗೊರೆ ಮತ್ತು ಅಭಿನಂದನಾ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಬೆಳಗ್ಗೆ 8 ಗಂಟೆಯಿಂದ ಮದ್ಯಾಹ್ನ ಒಂದು ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ನಿರ್ದೇಶಕ ರಿಯಾಝ್ ಸಜಿಪ್ ಎಲ್ಲ ರೀತಿಯ ಸಹಕಾರ ನೀಡಿದ ದುಬೈ ಹೆಲ್ತ್ ಅಥೋರಿಟಿ ಸಿಬ್ಬಂದಿಗೆ KSCC ಪರವಾಗಿ ಸ್ಮರಣಿಕೆ ನೀಡಿದರು. ಪ್ರಾಯೋಜಕರಾದ ಹೆಲ್ತ್ ಫರ್ಸ್ಟ್ ಫಾರ್ಮಸಿಯ ಶಾಜು ರಾಮಕೃಷ್ಣನ್ ಮತ್ತು ಯುಎಇ ಎಕ್ಸ್ಚೇಂಜ್ ನ ಗುರು ಪ್ರಸಾದ್ ಕದ್ರಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಸಂಯೋಜಕರಾದ ದುಬೈ ಸರಕಾರದ ಹೆಲ್ತ್ ಅಥೋರಿಟಿ ಮತ್ತು ಕಮ್ಯುನಿಟಿ ಡೆವಲಪ್‌ಮೆಂಟ್ ಅಥೋರಿಟಿ, ಪ್ರಾಯೋಜಕರಾದ ಡೆಕೋ ಸ್ಪೇಸ್ ಇಂಟೀರಿಯರ್ಸ್, ಹೆಲ್ತ್ ಫರ್ಸ್ಟ್ ಫಾರ್ಮಸಿ, ಯುಎಇ ಎಕ್ಸ್‌ಚೇಂಜ್, ಪ್ರೈಮ್ ಮೆಡಿಕಲ್ ಸೆಂಟರ್, DHA ಸಿಬ್ಬಂದಿ, ದಾನಿಗಳು ಹಾಗೂ ಈ ಕಾರ್ಯಕ್ರಮವನ್ನು ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಮುಹಮ್ಮದ್ ಇಸ್ಮಾಯಿಲ್ ರವರು ಧನ್ಯವಾದ ಸಮರ್ಪಿಸಿದರು.
ಮುಹಮ್ಮದ್ ಫರಾಝ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.