×
Ad

ಮಾ.15ರಂದು ಬೈಕಂಪಾಡಿಯ ಅಂಗರಗುಂಡಿಗೆ ಅಫ್ಝಲ್ ಖಾಸಿಮಿ ಕೊಲ್ಲಂ

Update: 2017-03-14 17:42 IST

ಮಂಗಳೂರು, ಮಾ.14: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂಗರಗುಂಡಿ ಯುನಿಟ್ ವತಿಯಿಂದ ಸಂಘಟನೆಯ ಹತ್ತನೆ ವರ್ಷದ ಪ್ರಯುಕ್ತ ಹಮ್ಮಿಕೊಂಡ ಏಕದಿನ ಧಾರ್ಮಿಕ ಮತ ಪ್ರಭಾಷಣ ಬೈಕಂಪಾಡಿ ಸಮೀಪದ ಅಂಗರಗುಂಡಿ ಬದ್ರಿಯ ಮಸೀದಿ ವಠಾರದಲ್ಲಿ ನಾಳೆ(ಮಾ.15)  ರಾತ್ರಿ ನಡೆಯಲಿದೆ.

 ಈ ಕಾರ್ಯಕ್ರಮದಲ್ಲಿ ಅಂತಾರಾಷ್ರೀಯ ವಾಗ್ಮಿ ಪ್ರಭಾಷಣ ಲೋಕದ ಧ್ರುವ ತಾರೆ ಉಸ್ತಾದ್ ಹಾಫಿಳ್ ಅಫ್ಝಲ್ ಕೊಲ್ಲಂ 'ಇಸ್ಲಾಮಿನಲ್ಲಿ ಐಖ್ಯತೆ ಹಾಗು ನಾಯಕತ್ವ' ಎನ್ನುವ ವಿಷಯದ ಬಗ್ಗೆ ಮಾತನಾಡಲಿದ್ದಾರೆ.

ಬೈಕಂಫಾಡಿ ಮುಹ್ಯದ್ದೀನ್ ಜುಮ್ಮಾ ಮಸ್ಜಿದ್ ಖತೀಬ್ ಹೈದರಾಲಿ ಸಖಾಫಿ ದುವಾರ್ಶಿವಚನ ಮಾಡಲಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಡಿವಿಜನ್ ಅಧ್ಯಕ್ಷ ಎಕೆ.ಅಶ್ರಫ್ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News