ಹಳೇ ನೋಟು ಬದಲಾವಣೆ : ಬ್ಯಾಂಕಿನ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

Update: 2017-03-14 13:18 GMT

ಹೊಸದಿಲ್ಲಿ,ಮಾ.14: ಕೆಲವರ ಕಪ್ಪುಹಣವನ್ನು ಮರೆಮಾಚಲು 1.17 ಕೋ.ರೂ. ವೌಲ್ಯದ ಹಳೆಯ ನೋಟುಗಳನ್ನು ಹೊಸನೋಟುಗಳಿಗೆ ಬದಲಾಯಿಸಿದ ಆರೋಪ ದಲ್ಲಿ ಕಾನ್ಪುರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೂವರು ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಬ್ಯಾಂಕಿನ ಅಕೌಂಟಂಟ್ ರಾಮ ನಾರಾಯಣ,ಹೆಡ್ ಕ್ಯಾಷಿಯರ್ ವಿನೀತ್ ಸೋನ್ಕರ್ ಮತ್ತು ರಜನಿ ಕುಂದರ್ ಅವರು ಆರೋಪಿಗಳಾಗಿದ್ದಾರೆ.

2016,ನ.8ರ ಬಳಿಕ ಅಸ್ತಿತ್ವದಲಿದ್ದ ನಿಯಮಗಳನ್ನು ಉಲ್ಲಂಘಿಸಿ 1,000 ಮತ್ತು 5,00 ರೂ.ಗಳ ನೋಟುಗಳನ್ನು ಹೊಸನೋಟುಗಳಿಗೆ ವಿನಿಮಯ ಮಾಡಿದ್ದಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಒಳಸಂಚು,ವಂಚನೆ ಮತ್ತು ಭ್ರಷ್ಟಾಚಾರ ಆರೋಪಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News