ಪಕ್ಷ ಬಯಸಿದರೆ ಮಲಪ್ಪುರಂನಿಂದ ಸ್ಪರ್ಧಿಸುವೆ : ಇ ಅಹ್ಮದ್ ರ ಪುತ್ರಿ

Update: 2017-03-14 13:40 GMT

ಹೊಸದಿಲ್ಲಿ,ಮಾ. 14: ಮಲಪ್ಪುರಂ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಲೀಗ್ ಬಯಸಿದರೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದು ಇ. ಅಹ್ಮದ್‌ರ ಪುತ್ರಿ ಫೌಝಿಯಾ ಹೇಳಿದ್ದಾರೆ.

" ಪಕ್ಷ ಬಯಸಿದರೆ ನಾನು ಮಲಪ್ಪುರಂನಿಂದ ಸ್ಪರ್ಧಿಸುವೆ. ಈ ವಿಷಯ ಹೈದರಲಿ ತಂಙಳ್‌ರಿಗೆ ಗೊತ್ತಿದೆ ಎಂದು ಟಿವಿ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಂಙಳ್‌ರನ್ನು ಸಂದರ್ಶಿಸಲು ಫೌಝಿಯಾ ಪಾಣಕ್ಕಾಡ್‌ಗೆ ಬಂದಿದ್ದರು. ಅದೇ ವೇಳೆ, ಅಭ್ಯರ್ಥಿ ನಿರ್ಧರಿಸುವ ಕುರಿತು ಲೀಗ್ ಕಾರ್ಯಕಾರಿ ಸಮಿತಿ ಸಭೆಯು ಬುಧವಾರ ಬೆಳಗ್ಗೆ ಮಲಪ್ಪುರಂನಲ್ಲಿ ನಡೆಯಲಿದೆ.

ನ0ತರ ಸಂಜೆ ಐದು ಗಂಟೆಗೆ ಲೀಗ್ ಸಂಸದೀಯ ಸಮತಿ ಸಭೆಯಲ್ಲಿ ಪಾಣಕ್ಕಾಡ್ ಹೈದರಲಿ ತಂಙಳ್ ಮಲಪ್ಪುರಂನ ಉಪಚುನಾವಣೆಗೆ ಲೀಗ್ ಅಭ್ಯರ್ಥಿಯನ್ನು ಘೋಷಿಸುವರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News