×
Ad

ರೈತರಿಂದ ಅರ್ಜಿ ಆಹ್ವಾನ

Update: 2017-03-14 19:31 IST

ಮಂಗಳೂರು, ಮಾ.14: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮಹ್ಮಾತ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ತೋಟ ಸ್ಥಾಪನೆಗೆ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ತೋಟಗಾರಿಕೆ ಬೆಳೆಗಳಾದ ಕೋಕೊ, ಕಾಳುಮೆಣಸು, ಅಡಿಕೆ, ಗೇರು, ತೆಂಗು, ಜಾಯಿಕಾಯಿ, ಲವಂಗ, ಮಾವು, ನುಗ್ಗೆ, ಅಂಗಾಂಶ ಬಾಳೆ, ಪಪ್ಪಾಯಿ, ವೀಳ್ಯದೆಲೆ, ಪೇರಳೆ ಮುಂತಾದ ಬೆಳೆಗಳ ಹೊಸ ತೋಟವನ್ನು ಸ್ವಂತ ಜಮೀನಿನಲ್ಲಿ ನಿರ್ಮಿಸಲು ಅರ್ಜಿದಾರರು ಕೂಲಿ ವೆಚ್ಚ ಹಾಗೂ ಪರಿಕರ ವೆಚ್ಚ ಪಡೆಯಲು ಅವಕಾಶವಿದೆ.

ಹಳೆಯ ತೆಂಗು ಹಾಗೂ ಅಡಿಕೆ ತೋಟಗಳನ್ನು ಪುನಶ್ಚೇತನಗೊಳಿಸಲು ವೈಯುಕ್ತಿಕ ಕೃಷಿ ಹೊಂಡ, ಕೃಷಿ ನೀರಾವರಿ ಬೋರ್‌ವೆಲ್‌ಗಳನ್ನು ಪುನಶ್ಚೇತನಗೊಳಿಸಲು ಅವಕಾಶವಿದೆ. ಆಸಕ್ತ ರೈತರು ಜಮೀನಿನ ಪಹಣಿ ಪತ್ರ ಹಾಗೂ ಜಾಬ್ ಕಾರ್ಡಿನ ಪ್ರತಿಯನ್ನು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಅರ್ಜಿಯೊಂದಿಗೆ ಸಲ್ಲಿಸಿ ಕಾಮಗಾರಿಗಳನ್ನು ನೋಂದಣಿ ಮಾಡಬಹುದಾಗಿದೆ.

ತೋಟಗಾರಿಕೆ ಇಲಾಖೆಯಿಂದ ತಾಂತ್ರಿಕ ಸೂಚನೆಗಳನ್ನು ಪಡೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಹಾಗೂ ಕೂಲಿವೆಚ್ಚ ಹಾಗೂ ಪರಿಕರ ವೆಚ್ಚಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತೋಟಗಾರಿಕಾ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News